ಮೂರನೇ ಬಾರಿ ಚೀನಾದ ನಾಯಕರಾದ ಜಿನ್‌ಪಿಂಗ್‌ಗೆ ಅಭಿನಂದಿಸಿದ ರಷ್ಯಾ, ಪಾಕ್‌!

masthmagaa.com:

ಮೂರನೇ ಬಾರಿಗೆ ಚೀನಾದಲ್ಲಿ ತಮ್ಮ ಅಧಿಕಾರ ಭದ್ರಪಡಿಸಿಕೊಂಡಿರೋ ಷಿ ಜಿನ್‌ಪಿಂಗ್‌ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅಭಿನಂದಿಸಿದ್ದಾರೆ. ʻಉಭಯ ದೇಶಗಳ ನಡುವಿನ ಸಹಕಾರವನ್ನ ಬಲಪಡಿಸೋ ಗುರಿಯನ್ನ ಮುಂದುವರಿಸೋಕೆ ನಾನು ಸಂತೋಷಪಡ್ತೇನೆʼ ಅಂತ ಪುಟಿನ್ ಹೇಳಿದ್ದಾರೆ. ಇತ್ತ ಪಾಕಿಸ್ತಾನದ ಪ್ರಧಾನಿ ಕೂಡ ಷಿ ಜಿನ್‌ಪಿಂಗ್‌ರನ್ನ ಅಭಿನಂದಿಸಿದ್ದಾರೆ. ಜೊತೆಗೆ ಪಾಕಿಸ್ತಾನದ ಅಧ್ಯಕ್ಷ ಆರಿಫ್‌ ಅಲ್ವಿ ಕೂಡ ಜಿನ್‌ಪಿಂಗ್‌ರನ್ನ ಪಾಕಿಸ್ತಾನದ ನಿಜವಾದ ಫ್ರೆಂಡ್‌ ಅಂತ ಕರೆದು ಅಭಿನಂದಿಸಿದ್ದಾರೆ.

-masthmagaa.com

Contact Us for Advertisement

Leave a Reply