G-7 ದೇಶಗಳ ಶೃಂಗಸಭೆ: ಜರ್ಮನಿಯಲ್ಲಿ ಮೋದಿ..!

masthmagaa.com:

ಯುಕ್ರೇನ್‌ ಯದ್ದದ ಮಧ್ಯೆದಲ್ಲಿಯೇ ಮಹತ್ವದ G-7ದೇಶಗಳ ಶೃಂಗಸಭೆ ಜರ್ಮನಿಯ ಮುನಿಚ್ ನಗರದಲ್ಲಿ ನಡೀತಿದೆ. ಎರಡು ದಿನಗಳ ಈ ಸಭೆಗೆ ಅಮೆರಿಕ, ಕೆನಡಾ, ಯುನೈಟೆಡ್‌ ಕಿಂಗ್ಡಮ್‌, ಇಟಲಿ, ಫ್ರಾನ್ಸ್‌, ಜರ್ಮನಿ ಹಾಗೂ ಜಪಾನ್‌ ದೇಶಗಳ ಮುಖ್ಯಸ್ಥರು ಆಗಮಿಸಿದ್ದು ಭಾರತ ಅತಿಥಿಯಾಗಿ ಹೋಗಿದೆ. ಪ್ರಧಾನಿ ಮೋದಿ ಸೇರಿದಂತೆ ಹಲವು ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇಂದು ಬೆಳಿಗ್ಗೆ ಜರ್ಮನಿ ತಲುಪಿದ ಮೋದಿಗೆ ಅಲ್ಲಿನ ರಾಜತಾಂತ್ರಿಕರು ಹಾಗೂ ಅನಿವಾಸಿ ಭಾರತೀಯರು ಸ್ವಾಗತ ಕೋರಿದ್ದಾರೆ. ಇನ್ನು ಇದೇ ವೇಳೆ 12 ದೇಶಗಳ ಮುಖ್ಯಸ್ಥರ ಜೊತೆಗೆ ಮೋದಿ ಮಾತುಕತೆ ನಡೆಸಲಿದ್ದಾರೆ ಅಂತ ಹೇಳಲಾಗಿದೆ. ಇದಾದ ಬಳಿಕ ಮೋದಿ UAE ಗೆ ಭೇಟಿ ನೀಡಲಿದ್ದು ಇತ್ತೀಚಿಗಷ್ಟೇ ನಿಧನರಾದ ಅಲ್ಲಿನ ರಾಜರಿಗೆ ಸಂತಾಪ ಸೂಚಿಸಲಿದ್ದಾರೆ.

-masthmagaa.com

Contact Us for Advertisement

Leave a Reply