ಪ್ರೀತಿ ನಿರಾಕರಿಸಿದ ಯುವತಿ ಫೋಟೋ ಎಡಿಟ್‌ ಮಾಡಿ ಬ್ಲಾಕ್‍ಮೇಲ್: ಆರೋಪಿ ಅರೆಸ್ಟ್

masthmagaa.com:

ತನ್ನ ಪ್ರೀತಿ ಒಪ್ಪಿಕೊಂಡಿಲ್ಲ ಅಂತ ಯುವತಿಯ ಫೋಟೋವನ್ನು ನಗ್ನ ಚಿತ್ರವೊಂದಕ್ಕೆ ಜೋಡಿಸಿ ಎಡಿಟ್ ಮಾಡಿ ಬ್ಲಾಕ್‍ಮೇಲ್ ಮಾಡ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೊಳಗಾದ ಆರೋಪಿಯನ್ನು 22 ವರ್ಷದ ಮಂಥನ್ ಪಾಟೀಲ್ ಅಂತ ಗುರುತಿಸಲಾಗಿದೆ. ಆರೋಪಿ ಬೆಳಗಾವಿಯ ಖಾನಾಪುರದ ಕಾಲೇಜಿನ ವಿದ್ಯಾರ್ಥಿನಿ ಒಬ್ಬಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆಕೆ ಒಪ್ಪದಿದ್ದಾಗ ಆಕೆಯ ಫೋಟೋವನ್ನು ನಗ್ನ ಚಿತ್ರದ ಜೊತೆ ಸೇರಿಸಿ ಎಡಿಟ್ ಮಾಡಿ ಕಿರುಕುಳ ಕೊಟ್ಟಿದ್ದಾನೆ. ಇಷ್ಟಕ್ಕೆ ಸುಮ್ಮನಾಗದೆ ಆಕೆಯ ಮೂವರು ಸ್ನೇಹಿತೆಯರ ಫೋಟೋ ಬಳಸಿ ಇದೇ ರೀತಿ ಬ್ಲಾಕ್‍ಮೇಲ್ ಮಾಡಿದ್ದಾನೆ. ಅಲ್ಲದೇ ಸೋಷಿಯಲ್‌ ಮೀಡಿಯಾದಲ್ಲಿ ಫೇಕ್‌ ಅಕೌಂಟ್‌ ಸೃಷ್ಟಿಸಿ ಅಲ್ಲಿ ಅಪ್ಲೋಡ್ ಮಾಡಿದ್ದಾನೆ. ಈ ಸಂಬಂಧ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಯನ್ನ ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

-asthmagaa.com

Contact Us for Advertisement

Leave a Reply