ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಢ್‌ಗಳಲ್ಲಿ ನೂತನ ಸಿಎಂಗಳ ಪ್ರಮಾಣ ವಚನ!

masthmagaa.com:

ಮಧ್ಯ ಪ್ರದೇಶ ಹಾಗೂ ಛತ್ತೀಸ್‌ಗಢ್‌ನ ಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮ ಬುಧವಾರ ನಡೆದಿದೆ. ಮೋಹನ್ ಯಾದವ್‌ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಉಪ ಮುಖ್ಯಮಂತ್ರಿಗಳಾಗಿ ರಾಜೀವ್‌ ಶುಕ್ಲಾ ಮತ್ತು ಜಗದೀಶ್‌ ದೆವ್ಡಾ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ರು. ಇನ್ನೊಂದೆಡೆ ಛತ್ತೀಸ್‌ಗಢ್‌ನ ಮುಖ್ಯಮಂತ್ರಿಯಾಗಿ ವಿಷ್ಣು ದಿಯೋ ಸಾಯಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೂಲಕ ಬುಡಕಟ್ಟು ಜನಾಂಗದಿಂದ ಸಿಎಂ ಆದ ರಾಜ್ಯದ ಎರಡನೇ ವ್ಯಕ್ತಿ ಅನ್ನೋ ಖ್ಯಾತಿಗೆ ವಿಷ್ಣು ಪಾತ್ರರಾಗಿದ್ದಾರೆ. ಉಪಮುಖ್ಯಮಂತ್ರಿಗಳಾಗಿ ಅರುಣ್‌ ಸಾವೊ ಮತ್ತು ವಿಜಯ್‌ ಶರ್ಮಾ ಕೂಡ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ. ಎರಡೂ ಕಾರ್ಯಕ್ರಮಗಳಲ್ಲಿ ಭಾಗಿಯಾದ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಸೇರಿದಂತೆ ಬಿಜೆಪಿ ನಾಯಕರು ನೂತನ ಸಿಎಂಗಳಿಗೆ ಶುಭ ಹಾರೈಸಿದ್ದಾರೆ.

-masthmagaa.com

Contact Us for Advertisement

Leave a Reply