ಜಗತ್ತು ಪಾಲಿಸ್ತಿರೋ ಸಮಯವನ್ನೇ ಬದಲಿಸ್ತೀನಿ: MP ಮುಖ್ಯಮಂತ್ರಿ

masthmagaa.com:

ಜಗತ್ತು ಫಾಲೋ ಮಾಡ್ತಿರೋ ಸ್ಟಾಂಡರ್ಡ್‌ ಟೈಮನ್ನ ಬದಲಾಯಿಸ್ತೀನಿ ಅಂತ ಮಧ್ಯಪ್ರದೇಶ್‌ ಸಿಎಂ ಮೋಹನ್‌ ಯಾದವ್‌ ಹೇಳಿದ್ದಾರೆ. ಏನಿದರ ಅರ್ಥ? ನಾವೆಲ್ಲ ಬಳಸ್ತಿರೋ ಸ್ಟಾಂಡರ್ಡ್‌ ಟೈಮ್‌ ಅಥ್ವಾ ಸಮಯವನ್ನ ಭೂಮಿ ಮೇಲೆ ನಾವು ಕಲ್ಪಿಸಿಕೊಂಡಿರೋ ಲಾಂಗಿಟ್ಯೂಡ್ಸ್‌ ಅಥ್ವಾ ರೇಖಾಂಶಗಳಿಂದ ಗುರುತಿಸ್ತೀವಿ. ಭಾರತದ ಅಲಹಾಬಾದ್‌ ಮೇಲೆ ಪಾಸ್‌ ಆಗೋ ʻ82 ಡಿಗ್ರಿ 30 ನಿಮಿಷʼ ಪೂರ್ವ ರೇಖಾಂಶದ ಆಧಾರದ ಮೇಲೆ ಭಾರತದಲ್ಲಿ ಟೈಮು ಇಷ್ಟಾಗಿದೆ ಅಂತ ಡಿಸೈಡ್‌ ಆಗತ್ತೆ. ಇದೇ IST ಅಥ್ವಾ ಇಂಡಿಯನ್‌ ಸ್ಟಾಂಡರ್ಡ್‌ ಟೈಮ್.‌ ಅದೇ ರೀತಿ ಪ್ರಪಂಚವನ್ನ ಪೂರ್ವ, ಪಶ್ಚಿಮ ಅಂತ ಡಿಸೈಡ್‌ ಮಾಡೋಕೆ ಬ್ರಿಟನ್‌ನ ಗ್ರೀನ್‌ ವಿಚ್‌ ನಗರದ ಬಳಿ ಒಂದು ರೇಖಾಂಶ ಇದೆ. ಇದು 0⁰ ರೇಖಾಂಶ. ಇದರ ಆಧಾರದ ಮೇಲೆ GMT ಅಥ್ವಾ ಗ್ರೀನ್‌ವಿಚ್‌ ಮೀನ್‌ ಟೈಮ್‌ ಡಿಸೈಡ್‌ ಆಗತ್ತೆ. ಇದೀಗ ಮಧ್ಯ ಪ್ರದೇಶ್‌ ಸಿಎಂ ಮೋಹನ್‌ ಯಾದವ್‌ 300 ವರ್ಷಗಳ ಹಿಂದೇನೆ ಭಾರತ ಪ್ರಪಂಚದ ಸ್ಟಾಂಡರ್ಡ್‌ ಟೈಮನ್ನ ಸೆಟ್‌ ಮಾಡಿತ್ತು. ಇದಕ್ಕೆ ಬೇಕಾದ ಆಧಾರ ಇನ್ನೂ ಮಧ್ಯಪ್ರದೇಶದ ಉಜ್ಜೈನಿಯಲ್ಲಿದೆ. ಸೋ 0⁰ ರೇಖಾಂಶವನ್ನ ಗ್ರೀನ್‌ವಿಚ್‌ನಿಂದ ಉಜ್ಜೈನಿಗೆ ಶಿಫ್ಟ್‌ ಮಾಡೋಕೆ ಅಗತ್ಯ ಕ್ರಮ ತಗೊಳ್ತೀವಿ ಅಂದಿದ್ದಾರೆ. ಅಲ್ಲದೆ ಮಧ್ಯರಾತ್ರಿ 12 ಗಂಟೆಗೆ ದಿನ ಶುರುವಾಗೋದನ್ನ ಒಪ್ಪೋಕಾಗಲ್ಲ. ಸೂರ್ಯ ಹುಟ್ಟಿದ ಮೇಲೆ ಬೆಳಗಾಗುತ್ತೆ. ಹಂಗಾಗಿ ನಾವು ಜಗತ್ತಿನ ಟೈಮನ್ನೇ ಚೇಂಜ್‌ ಮಾಡ್ತೀವಿ ಅಂತ ಮೋಹನ್‌ ಯಾದವ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply