ಹಿಂದೂ ಧರ್ಮಕ್ಕೆ ಸೇರದವ್ರಿಗೆ ತಮಿಳುನಾಡಿನ ದೇವಸ್ಥಾಗಳಲ್ಲಿ ಪ್ರವೇಶವಿಲ್ಲ!

masthmagaa.com:

ಹಿಂದೂ ಧರ್ಮಕ್ಕೆ ಸೇರದವರಿಗೆ ಇನ್ಮುಂದೆ ತಮಿಳುನಾಡಿನ ದೇವಸ್ಥಾನಗಳ ಪ್ರವೇಶಕ್ಕೆ ನಿಷೇಧ ಹೇರಿ ಮದ್ರಾಸ್‌ ಹೈಕೋರ್ಟ್‌ ತೀರ್ಪು ನೀಡಿದೆ. ʻದೇವಸ್ಥಾನ ಯಾವ್ದೇ ರೀತಿ ಪ್ರವಾಸಿ ಅಥ್ವಾ ಪಿಕ್‌ನಿಕ್‌ ತಾಣವಲ್ಲ. ಆದ್ರಿಂದ ಹಿಂದೂ ಧರ್ಮಕ್ಕೆ ಸೇರದವರಿಗೆ ದೇವಸ್ಥಾನದ ಧ್ವಜಸ್ತಂಭದಿಂದ ಮುಂದಕ್ಕೆ ಪ್ರವೇಶವಿಲ್ಲʼ ಅಂತ ಕೋರ್ಟ್ ತೀರ್ಪು ನೀಡಿದೆ. ಈ ಬಗ್ಗೆ ಎಲ್ಲಾ ದೇವಸ್ಥಾನಗಳಲ್ಲಿ ಸೂಚನಾ ಫಲಕ ಅಳವಡಿಸೋಕೆ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಆದೇಶಿಸಿದೆ. ಈ ಬೋರ್ಡ್‌ನಲ್ಲಿ ʻಹಿಂದು ಧರ್ಮಕ್ಕೆ ಸೇರದವರಿಗೆ ಒಳಗೆ ಬರಲು ಪ್ರವೇಶವಿಲ್ಲʼ ಅಂತ ಉಲ್ಲೇಖಿಸಬೇಕು ಎನ್ನಲಾಗಿದೆ. ಎಲ್ಲಿಯಾದ್ರೂ ಹಿಂದೂ ಧರ್ಮಕ್ಕೆ ಸೇರದವರು ದೇವಸ್ಥಾನಕ್ಕೆ ಭೇಟಿ ನೀಡಿದ್ರೆ, ಅವ್ರಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗುತ್ತೆ. ಅಂದ್ರೆ ತಾವು ಯಾವ್ದೇ ಒಂದು ಪ್ರತ್ಯೇಕ ದೇವರ ಮೇಲೆ ನಂಬಿಕೆ ಇಟ್ಕೊಂಡಿದ್ದೀವಿ. ಹಾಗೂ ಹಿಂದೂ ಧರ್ಮದ ಮತ್ತು ದೇವಸ್ಥಾನದ ಎಲ್ಲಾ ರೀತಿಯ ಪದ್ಧತಿ ಮತ್ತು ಆಚರಣೆಗಳನ್ನ ಸರಿಯಾಗಿ ಪಾಲಿಸ್ತೀವಿ ಅಂತ ಮುಚ್ಚಳಿಕೆ ಬರೀಬೇಕಂತೆ. ಆಗ ಮಾತ್ರ ದೇವಸ್ಥಾನದೊಳಗೆ ಪ್ರವೇಶ ಸಿಗುತ್ತೆ ಅಂತ ಕೋರ್ಟ್‌ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಅಂದ್ಹಾಗೆ ಮದ್ರಾಸ್‌ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಎಸ್‌ ಶ್ರೀಮತಿ ಈ ತೀರ್ಪು ಹೊರಡಿಸಿದ್ದಾರೆ.

-masthmagaa.com

Contact Us for Advertisement

Leave a Reply