ಕರ್ನಾಟಕಕ್ಕೆ KSRTC ಹೆಸರು ಬಳಸಲು ಸಮ್ಮತಿಸಿದ ಮದ್ರಾಸ್‌ ಹೈಕೋರ್ಟ್!

masthmagaa.com:

KSRTC ಹೆಸರು ಬಳಕೆ ವಿಚಾರವಾಗಿ ಕೇರಳ ಸಾರಿಗೆ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನ ಮದ್ರಾಸ್‌ ಹೈಕೋರ್ಟ್‌ ವಜಾ ಮಾಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ KSRTC ಅಂತ ಹೆಸರು ಬಳಸೋದಕ್ಕೆ ಯಾವುದೇ ಅಭ್ಯಂತರ ಇಲ್ಲ ಅಂತ ಹೈಕೋರ್ಟ್‌ ಹೇಳಿದೆ. ಅಂದ್ಹಾಗೆ 1973ರಿಂದ ಈ ಹೆಸರನ್ನ ಬಳಸ್ತಿರೋದಾಗಿ ಕರ್ನಾಟಕ ದಾಖಲೆಗಳನ್ನ ಸಲ್ಲಿಸಿ ಟ್ರೇಡ್‌ ಮಾರ್ಕ್‌ ಪಡೆದಿದೆ. ಚೆನ್ನೈ ಮೂಲದ ಟ್ರೇಡ್‌ ಮಾರ್ಕ್‌ ರಿಜಿಸ್ಟ್ರೇಶನ್‌ ಸಂಸ್ಥೆ ಕರ್ನಾಟಕಕ್ಕೆ ಟ್ರೇಡ್‌ ಮಾರ್ಕ್‌ ನೀಡಿದೆ. ಆದ್ರೆ ಕೇರಳ ಸಾರಿಗೆ ಸಂಸ್ಥೆ ತಕರಾರು ತೆಗೆದು ಚೆನ್ನೈ ಇಂಟಲೆಕ್ಚುವಲ್‌ ಪ್ರಾಪರ್ಟಿ ಅಪೀಲ್‌ ಬೋರ್ಡ್‌ಗೆ ಅರ್ಜಿ ಸಲ್ಲಿಸಿತ್ತು. ಕೇಂದ್ರ ಸರ್ಕಾರ ಆ ಬೋರ್ಡನ್ನೇ ರದ್ದು ಮಾಡಿ ಅಲ್ಲಿದ್ದ ಕೇಸ್‌ಗಳನ್ನ ಮದ್ರಾಸ್‌ ಹೈ ಕೋರ್ಟ್‌ಗೆ ವರ್ಗಾಯಿಸಿತ್ತು. ಮದ್ರಾಸ್‌ ಹೈ ಕೋರ್ಟ್‌ ಇದು ವಿಶೇಷ ಕೇಸ್‌ ಅಂತ ಪರಿಗಣಿಸಿ ವಿಚಾರಣೆ ನಡೆಸಿದೆ. ಅಲ್ಲದೆ ಕರ್ನಾಟಕದ ಲೋಗೋದಲ್ಲಿ ಗಂಡಬೇರುಂಢದ ಚಿತ್ರ ಇದೆ. ಕೇರಳ ಸಾರಿಗೆ ಲೋಗೊದಲ್ಲಿ ಆನೆ ಚಿತ್ರ ಇದೆ. ಇಲ್ಲಿ ಟ್ರೇಡ್‌ ಮಾರ್ಕ್‌ ಉಲ್ಲಂಘನೆಯೇ ಆಗಿಲ್ಲ. ಕರ್ನಾಟಕ ಸಾರಿಗೆ KSRTC ಹೆಸರು ಬಳಸೋದ್ರಿಂದ ನಮಗೆ ಯಾವುದೇ ಅಭ್ಯಂತರ ಇಲ್ಲ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply