ಮಹಾರಾಷ್ಟ್ರ ಬಸ್‌ ಅಪಘಾತದಲ್ಲಿ ಮೃತಪಟ್ಟವರ ದೇಹಗಳಿಗೆ ಸಾಮೂಹಿಕ ಅಂತ್ಯಸಂಸ್ಕಾರ!

masthmagaa.com:

ಮಹಾರಾಷ್ಟ್ರದ ಬುಲ್ಲಾನ ಜಿಲ್ಲೆಯ ಸಮೃದ್ಧಿ ಎಕ್ಸ್‌ಪ್ರೆಸ್ ವೇನಲ್ಲಿ ನಡೆದ ಬಸ್ ದುರಂತದಲ್ಲಿ ಸಜೀವ ದಹನಗೊಂಡ 25 ಜನರ ಪೈಕಿ 24 ಜನರ ಮೃತದೇಹಗಳ ಅಂತ್ಯಸಂಸ್ಕಾರವನ್ನ ಸಾಮೂಹಿಕವಾಗಿ ನಡೆಸಲಾಗುವುದು ಅಂತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಭೀಕರ ದುರಂತದಲ್ಲಿ ಸಾವನ್ನಪ್ಪಿರೋರನ್ನ ಗುರುತಿಸೋಕೆ ಆಗದಷ್ಟು ಸುಟ್ಟು ಹೋಗಿರೋದ್ರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಇನ್ನು ಡಿಎನ್‌ಎ ಪರೀಕ್ಷೆ ಅಂತ ಹೋದ್ರೆ ಅದಕ್ಕೆ ಸಾಕಷ್ಟು ಸಮಯ ಹಿಡಿಯುತ್ತೆ. ಹೀಗಾಗಿ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಹಲವು ದಿನಗಳು ಕಾಯಬೇಕಾಗುತ್ತದೆ. ಅದ್ರಿಂದ ಈ ಪರಿಸ್ಥಿತಿ ಬಗ್ಗೆ ಮೃತರ ಕುಟುಂಬಗಳಿಗೆ ಮನವರಿಕೆ ಮಾಡಲಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಇದೇ ವೇಳೆ ಒಂದು ಮೃತದೇಹವನ್ನ ಮಾತ್ರ ಅವ್ರ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ ಅಂತ ತಿಳಿಸಿದ್ದಾರೆ. ಅಂದ್ಹಾಗೆ ಇದೇ ಸಮೃದ್ಧಿ ಎಕ್ಸ್‌ಪ್ರೆಸ್‌ವೇನಲ್ಲಿ ಕಳೆದ 6 ತಿಂಗಳಲ್ಲಿ ರಸ್ತೆ ಅಪಘಾತಗಳಲ್ಲಿ 88 ಜನರು ಪ್ರಾಣ ಕಳೆದುಕೊಂಡಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ. ಇನ್ನು 6 ಲೇನ್‌ನ ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತಗಳಿಗೆ ಹೈವೇ ಹಿಪ್ನಾಸಿಸ್‌ ಕೂಡ ಒಂದು ಕಾರಣ ಅಂತ ಅಲ್ಲಿನ ರಾಜ್ಯ ಹೆದ್ದಾರಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಅಂದ್ಹಾಗೆ ಈ ಹೈವೇ ಹಿಪ್ನಾಸಿಸ್‌ ಅಂದ್ರೆ ಏನು, ಯಾಕೆ ಈ ರೀತಿ ಅಗುತ್ತೆ ಅನ್ನೋದ್ರ ಕುರಿತು ಈಗಾಗಲೇ ನಾವು ವರದಿ ಮಾಡಿದ್ದು, ನೀವದನ್ನ ಚೆಕ್‌ ಮಾಡ್ಬೋದು.

-masthmagaa.com

Contact Us for Advertisement

Leave a Reply