ಮರಾಠರ ಬೇಡಿಕೆಗೆ ಫಲ! ಮೀಸಲಾತಿಗೆ ಬಿಲ್‌ ಅನುಮೋದನೆ!

masthmagaa.com:

ಹಲವಾರು ವರ್ಷಗಳ ಮರಾಠರ ಪ್ರತಿಭಟನೆಗೆ ಫಲ ಸಿಕ್ಕಿದೆ.. ಅವ್ರ ಬೇಡಿಕೆಗೆ ಈಗ ಉತ್ತರ ದೊರಕಿದೆ. ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ನೀಡ್ಬೇಕೆಂಬ ಮರಾಠರ ಸುದೀರ್ಘ ಡಿಮಾಂಡ್‌ಗೆ ಇದೀಗ ಮಹಾರಾಷ್ಟ್ರ ಸರ್ಕಾರ ಬಾಗಿದೆ. ಎಸ್‌, ಮರಾಠ ಸಮುದಾಯದ ಮೀಸಲಾತಿ ಬಿಲ್‌ಗೆ ಫೆಬ್ರುವರಿ 20 ರಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮರುದಿನವೇ ಈ ಮೀಸಲಾತಿಗೆ ಅನುಮೋದನೆ ಸಿಕ್ಕಿದೆ. ಈ ಮೂಲಕ ಮರಾಠ ಸಮುದಾಯಕ್ಕೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ 10% ಮೀಸಲಾತಿ ನೀಡಲಾಗುತ್ತೆ. ಸದ್ಯ ಮಹಾರಾಷ್ಟ್ರ ಸಿಎಂ ಏಕ್ನಾಥ್‌ ಶಿಂಧೆ ಈ ಬಿಲ್‌ನ್ನ ವಿಧಾನ ಪರಿಷತ್ತಿನ ಮುಂದೆ ಇಡಲಿದ್ದಾರೆ. ಸೋ ವಿಧಾನ ಪರಿಷತ್ತಿನಿಂದ ಈ ಬಿಲ್‌ಗೆ ಒಪ್ಪಿಗೆ ಸಿಕ್ಕ ನಂತ್ರ ಇದು ಕಾನೂನಾಗಿ ಬದಲಾಗಲಿದೆ… ಮರಾಠರ ಕನಸು ನನಸಾಗಲಿದೆ. ಅಂದ್ಹಾಗೆ ಈ ಬಿಲ್‌ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅವಿರೋಧದಿಂದ ಪಾಸ್‌ ಆಗಿದೆ.

-masthmagaa.com

Contact Us for Advertisement

Leave a Reply