ಬೆಳಗಾವಿ, ಕಾರವಾರ, ನಿಪ್ಪಾಣಿ, ಭಾಲ್ಕಿಯ ಪ್ರತಿಯೊಂದು ಇಂಚನ್ನೂ ಮಹಾರಾಷ್ಟ್ರದ ಭಾಗ ಮಾಡುತ್ತೇವೆ: ಮಹಾ ಸಿಎಂ

masthmagaa.com:

ಗಡಿ ವಿಚಾರದಲ್ಲಿ ಮಹರಾಷ್ಟ್ರದ ಕಿರಿಕಿರಿ ಮತ್ತೊಂದು ಮಜಲನ್ನ ತಲುಪಿದೆ. ಬೆಳಗಾವಿ ಗಡಿ ವಿವಾದದ ಕುರಿತು ಕರ್ನಾಟಕದ ಮಾದರಿಯಲ್ಲೇ ಈಗ ಮಹಾರಾಷ್ಟ್ರ ವಿಧಾನಸಭೆ ಕೂಡ ನಿರ್ಣಯವೊಂದನ್ನ ಅಂಗೀಕಾರ ಮಾಡಿದೆ. ಕರ್ನಾಟಕದ ಮರಾಠಿ ವಿರೋಧಿ ನಿಲುವನ್ನ ನಾವು ಖಂಡಿತ್ತೇವೆ ಅಂತ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅಲ್ಲಿನ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದಾರೆ. ಅಲ್ಲಿ ಅಂದ್ರೆ ಕರ್ನಾಟಕದಲ್ಲಿ ಮರಾಠಿ ಮಾತನಾಡುವ 865 ಗ್ರಾಮಗಳಿವೆ, ಈ ಗ್ರಾಮಗಳ ಇಂಚಿಂಚನ್ನೂ ಬಿಡದೆ ಅವುಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಬೇಕು. ಸುಪ್ರೀಂಕೋರ್ಟ್ ಏನು ಕೇಳುತ್ತದೆಯೋ ಅದನ್ನು ಮಹಾರಾಷ್ಟ್ರ ಸರ್ಕಾರ ಮಾಡುತ್ತದೆ..ಬೆಳಗಾವಿ, ಕಾರವಾರ, ಬೀದರ್, ನಿಪ್ಪಾಣಿ, ಭಾಲ್ಕಿಯ ಪ್ರತಿಯೊಂದು ಇಂಚನ್ನೂ ಮಹಾರಾಷ್ಟ್ರದ ಭಾಗವನ್ನಾಗಿ ಮಾಡಲಾಗುವುದು ಅಂತ ನಿರ್ಣಯದಲ್ಲಿ ಹೇಳಲಾಗಿದೆ. ಅಂದ್ಹಾಗೆ ಕಳೆದ ವಾರ ಕರ್ನಾಟಕ ವಿಧಾನಸಭೆ ಕೂಡ ಬೆಳಗಾವಿ ಸೇರಿ ಯಾವ ನೆಲವನ್ನ ಬಿಟ್ಟುಕೊಡುವ ಮಾತೇ ಇಲ್ಲ. ಗಡಿ ವಿವಾದ ಹುಟ್ಟುಹಾಕಿ ಪ್ರಚೋದನಕಾರಿ ಹೇಳಿಕೆ ಕೊಡ್ತಿರೋ ಮಹಾರಾಷ್ಟ್ರ ನಾಯಕರ ಹೇಳಿಕೆಯನ್ನ ನಾವು ಖಂಡಿಸ್ತೇವೆ ಅಂತ ಕರ್ನಾಟಕ ವಿಧಾನಸಭೆ ಕೂಡ ನಿರ್ಣಯವೊಂದನ್ನ ಮಂಡಿಸಿತ್ತು. ಇಷ್ಟಾದ್ರೂ ಈಗ ಮಹಾರಾಷ್ಟ್ರ ಸರ್ಕಾರ ಗಡಿ ವಿಚಾರದಲ್ಲಿ ತನ್ನ ಕ್ಯಾತೆಯನ್ನ ಬಿಟ್ಟಿಲ್ಲ. ಇನ್ನು ಮಹಾರಾಷ್ಟ್ರ ನಿರ್ಣಯದ ಕುರಿತು ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್‌ ಅಶೋಕ್‌ ʻಕರ್ನಾಟಕದ ಇಂಚೂ ಭೂಮಿಯನ್ನ ಯಾರಿಗೂ ಬಿಟ್ಟುಕೊಡಲ್ಲʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply