ಮಾಹಾರಾಷ್ಟ್ರದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ: ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡ NCP ನಾಯಕ ಅಜಿತ್‌ ಪವಾರ್‌

masthmagaa.com:

ಶಿವಸೇನೆ ಇಬ್ಭಾಗವಾಗಿ ಶಿಂಧೆ-ಬಿಜೆಪಿ ಮೈತ್ರಿ ಸರ್ಕಾರ ಬಂದು ಸರಿಯಾಗಿ ಒಂದು ವರ್ಷವಾಗಿರೋವಾಗ್ಲೇ ಮಹಾರಾಷ್ಟ್ರದಲ್ಲಿ ಮತ್ತೊಂದು ಕ್ಷಿಪ್ರಕ್ರಾಂತಿ ನಡೆದಿದೆ. ಮಹತ್ವದ ಬೆಳವಣಿಗೆಯಲ್ಲಿ NCP ನಾಯಕ ಮತ್ತು ವಿರೋಧ ಪಕ್ಷದ ನಾಯಕರಾಗಿದ್ದ ಅಜಿತ್‌ ಪವಾರ್‌ ಮಹಾವಿಕಾಸ ಅಘಾಡಿಗೆ ಗುಡ್‌ಬೈ ಹೇಳಿ ಬಿಜೆಪಿ ನೇತೃತ್ವದ NDA ಸರ್ಕಾರಕ್ಕೆ ನೆಗೆದಿದ್ದಾರೆ. ಅಲ್ಲಿನ ಸಿಎಂ ಏಕನಾಥ್‌ ಶಿಂಧೆ ಅವ್ರ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿ, ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವ್ರ ಜೊತೆಗೆ NCPಯ 9 ಜನ ಶಾಸಕರು ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಂತ್ರ ಮಾತಾಡಿರೋ ಅಜಿತ್‌ ಪವಾರ್‌, ಪ್ರಧಾನಿ ನರೇಂದ್ರ ಮೋದಿಯವರನ್ನ ಹೊಗಳಿದ್ದು, ಮಹಾರಾಷ್ಟ್ರದ ಅಭಿವೃದ್ಧಿಗಾಗಿ ಶಿವಸೇನೆ ಜೊತೆ ಸೇರಿಕೊಂಡರೆ ನಾವು ಬಿಜೆಪಿ ಜೊತೆಯಲ್ಲಿ ಸಾಗಬಹುದು ಅಂತ ಹೇಳಿದ್ದಾರೆ. ಜೊತೆಗೆ ಆತಂಕ ಪಡೋ ಅಗತ್ಯವಿಲ್ಲ ಯಾಕಂದ್ರೆ NCP ಹಾಗೂ ಪಕ್ಷದ ಎಲ್ಲಾ ಶಾಸಕರೂ ನಮ್ಮ ಬಳಿ ಇದ್ದಾರೆ ಅಂತ ಅಜಿತ್‌ ತಿಳಿಸಿದ್ದಾರೆ. ಹಾಗೆ ಶರದ್‌ ಪವಾರ್‌ ಅವ್ರಿಗೆ ಕಾಲ್‌ ಮಾಡಿದ್ದೆ ಎಲ್ಲರ ಆಶಿರ್ವಾದ ಪಡೆದಿದ್ದೇನೆ. ನಾವು ಈಗಲೂ NCPನೇ ಅಂತ ಹೇಳಿದ್ದಾರೆ. ಇನ್ನೊಂದ್‌ ಕಡೆ ಎಲ್ಲಾ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರೋ NCP ಮುಖ್ಯಸ್ಥ ಶರದ್‌ ಪವಾರ್‌ ಅವ್ರು, ಅಜಿತ್‌ ಪವಾರ್‌ ನನಗೆ ಕರೆ ಮಾಡಿಲ್ಲ ಹಾಗೂ ಮುಂಬೈನಲ್ಲಿ ನಡೆದ ಸಭೆಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಅಂತ ಹೇಳಿದ್ದಾರೆ. ಜೊತೆಗೆ ಈ 9 ಜನ ಬಂಡಾಯ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲಿದ್ದು, ನಿಜವಾದ NCP ನಾಯಕರು ಯಾರು ಅಂತ ಜನ ನಿರ್ಧಾರ ಮಾಡ್ತಾರೆ ಹಾಗೂ ನಾನು ಮತ್ತೆ ಪಕ್ಷವನ್ನ ಕಟ್ಟೋ ಕೆಲಸ ಮಾಡ್ತೀನಿ ಅಂತ ಶರದ್‌ ಪವಾರ್‌ ತಿಳಿಸಿದ್ದಾರೆ. ಇದೇ ವೇಳೆ ಇದೆಲ್ಲಾ ಮಾಡಿರೋದು ಪ್ರಧಾನಿ ಮೋದಿಯವರು ಅಂತ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply