ಮಹಾಸರ್ಕಸ್‌: ಅಘಾಡಿ ಮೈತ್ರಿ ಬಿಡೋಕೆ ಸಿದ್ದ ಎಂದ ಶಿವಸೇನೆ, ರೆಬೆಲ್ಸ್‌ಗೆ 24ಗಂಟೆಗಳ ಗಡುವು!

masthmagaa.com:

ಮಹಾರಾಷ್ಟ್ರದಲ್ಲಿ ನಡೀತಾ ಇರೋ ಪಾಲಿಟಕಲ್‌ ಹೈಡ್ರಾಮಾ ಯಾವುದೇ ಮೆಗಾ ಸೀರಿಯಲ್‌ಗಿಂತ ಕಮ್ಮಿ ಇಲ್ಲ ಅನ್ನೋ ರೀತಿ ಸಾಗ್ತಿದೆ. ಹೇಗಾದ್ರು ಮಾಡಿ ಸರ್ಕಾರವನ್ನ ಉಳಿಸಿಕೊಳ್ಳಲೇ ಬೇಕು ಅಂತ ನೋಡ್ತಿರೋ ಶಿವಸೇನೆ ಮೈತ್ರಿಕೂಟ ಬಿಡುವ ಮಾತಾಡಿದೆ. ಈ ಬಗ್ಗೆ ಮಾತಾಡಿರೋ ಶಿವಸೇನೆ ನಾಯಕ ಸಂಜಯ್‌ ರಾವುತ್‌, ಮಹಾವಿಕಾಸ ಅಘಾಡಿಯಿಂದ ಹೊರಹೋಗೋಕೆ ನಾವು ರೆಡಿ ಇದ್ದೀವಿ. ಆದ್ರೆ ನೀವು 24 ಗಂಟೆ ಒಳಗೆ ಮುಂಬೈಗೆ ವಾಪಸ್ಸಾದ್ರೆ ಮಾತ್ರ ಅಂತ ರೆಬಲ್‌ ಶಾಸಕರಿಗೆ ಡೆಡ್‌ಲೈನ್‌ ಕೊಟ್ಟಿದ್ದಾರೆ.. ಜೊತೆಗೆ ಏನೆ ಇದ್ರು ಬಂದು ಸಿಎಂ ಜೊತೆ ಚರ್ಚೆ ಮಾಡಿ ಟ್ವಿಟರ್‌, ವಾಟ್ಸಾಪ್‌ನಲ್ಲೆಲ್ಲ ಪತ್ರ ಬರೀಬೇಡಿ ಅಂತ ಹೇಳಿದ್ದಾರೆ. ಇನ್ನು ಇವತ್ತು ವಿಡಿಯೋ ಒಂದನ್ನ ಬಿಡುಗಡೆ ಮಾಡಿರೋ ರೆಬೆಲ್‌ ಶಾಸಕರು ಉದ್ಧವ್‌ ಠಾಕ್ರೆಗೆ ಚೆಕ್‌ಮೇಟ್‌ ನೀಡಿದ್ದಾರೆ. ವಿಡಿಯೋದಲ್ಲಿ ಈ ಮೆಗಾ ಆಪರೇಷನ್‌ನ್ನ ಅನಾವರಣ ಆಗಿದೆ. 42 ಶಾಸಕರು ಒಟ್ಟಿಗೆ ಫೋಟೋ ಸೆಷನ್‌ಗೆ ಕೂತಿರೋದು ಕಂಡುಬಂದಿದೆ. ಈ ವೇಳೆ ಶಿವಸೇನೆ ಮತ್ತು ಬಾಳ ಠಾಕ್ರೆಪರ ಶಾಸಕರು ಘೋಷಣೆ ಕೂಗಿದ್ದಾರೆ. ಸೋ ಈಗ ಏಕನಾಥ್‌ ಶಿಂಧೆ ಬಣವೇ ಶಿವಸೇನೆಯಲ್ಲಿ ಪವರ್‌ಫುಲ್‌ ಆಗಿದ್ದು, ಪಕ್ಷಾಂತರ ನಿಷೇಧ ಕಾಯಿದೆಯ ಭಯವೇ ಇಲ್ಲದೇ ಆರಾಮಾಗಿ ಪಕ್ಷವನ್ನ ಇಬ್ಭಾಗ ಮಾಡಬಹುದುದಾಗಿದೆ. ಮೂಲಗಳ ಪ್ರಕಾರ ಉದ್ಧವ್‌ ಠಾಕ್ರೆ ನಡೆಸಿದ ಸಭೆಗೆ ಕೇವಲ 13 ಶಾಸಕರು ಮಾತ್ರ ಅಟೆಂಡ್‌ ಆಗಿದ್ರು ಎನ್ನಲಾಗಿದೆ. ಇನ್ನು ಈಗಾಗಲೇ ಉದ್ಧವ್‌ ಠಾಕ್ರೆ ಅಧಿಕೃತ ಸಿಎಂ ನಿವಾಸವನ್ನ ಖಾಲಿ ಮಾಡಿದ್ದು, ರಾಜಿನಾಮೆ ನೀಡೋದಷ್ಟೆ ಬಾಕಿಯಿದೆ. ಬಹುಶಃ ಭಾರತದ ರಾಜಕಾರಣದ ಇತಿಹಾಸದಲ್ಲೇ ಬಹುದೊಡ್ಡ ಮತ್ತು ಪ್ರಮುಖ ಬಂಡಾಯವಾಗಿರಬಹುದು. ಇನ್ನು ರೆಬೆಲ್‌ ಶಾಸಕರು ಉದ್ಧವ್‌ ಠಾಕ್ರೆಗೆ ಪತ್ರ ಒಂದನ್ನ ಕೂಡ ಬರೆದಿದ್ದಾರೆ. ಅದ್ರಲ್ಲಿ, ಎರಡುವರೆ ವರ್ಷಗಳ ಕಾಲ ನೀವು ನಮ್ಮನ್ನ ನಿಮ್ಮ ಮನೆಯೊಳಗೆ ಬಿಟ್ಟುಕೊಳ್ಳಲೇ ಇಲ್ಲ. ಗಂಟೆಗಟ್ಟಲೆ ನಿಮಗಾಗಿ ಗೇಟ್‌ ಬಳಿ ಕಾಯ್ಬೇಕಾಗ್ತಿತ್ತು ಅಂತ ಆರೋಪಿಸಿದ್ದಾರೆ. ಇನ್ನು ಕೊನೆ ಕ್ಷಣದಲ್ಲಿ ಮತ್ತೆ ಮೂವರು ಶಿವಸೇನೆ ಶಾಸಕರು ಗುವಾಹಟಿಯಲ್ಲಿ ಶಿಂಧೆ ಬಣ ಸೇರಿದ್ದಾರೆ. ಅದ್ರಲ್ಲಿ ಒಬ್ಬರಾದ ದೀಪಕ್‌ ಕೇಸರ್ಕರ್‌ ಮಾತಾಡಿ, ನಮಗೆ ಉದ್ಧವ್‌ ಠಾಕ್ರೆ ಅವ್ರು ರಾಜಿನಾಮೆ ನೀಡೋದು ಬೇಡ. ಆದ್ರೆ ಅವ್ರು ಕಾಂಗ್ರೆಸ್‌-ಎನ್‌ಸಿಪಿ ಜೊತೆಗಿನ ಮೈತ್ರಿ ಬಿಟ್ಟು ಬಿಜೆಪಿ ಜೊತೆಗೆ ಮೈತ್ರಿ ಮಾಡ್ಕೋಬೇಕು ಅಂತ ಹೇಳಿದ್ದಾರೆ. ಇನ್ನು ಏಕ್‌ನಾಥ್‌ ಶಿಂಧೆಯೇ ನಮ್ಮ ನಾಯಕ ಅಂತ ರೆಬೆಲ್‌ ಶಾಸಕರು ರಾಜ್ಯಪಾಲರಿಗೆ ನೆನ್ನೆ ಪತ್ರ ಬರೆದಿದ್ರು. ಇದ್ರ ಬೆನ್ನಲ್ಲೆ ಮೈತ್ರಿ ಪಕ್ಷಗಳಾದ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಸದ್ಯಕ್ಕೆ ಬಿಕ್ಕಟ್ಟಿನಿಂದ ಹೊರಬರೋಕೆ ಶಿಂಧೆಯನ್ನೇ ಸಿಎಂ ಮಾಡಿ ಅಂತ ಸಲಹೆ ನೀಡಿವೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply