ʻಮಹಾʼರಾಜಕೀಯ ಹೈಡ್ರಾಮ: ಯು ಟರ್ನ್‌ ಹೊಡೆದ ಏಕನಾಥ್‌ ಶಿಂಧೆ!

masthmagaa.com:

ಮಹಾರಾಷ್ಟ್ರ ರಾಜಕೀಯದಲ್ಲಿ ನಡೀತಿರೋ ಮಹಾ ಹೈಡ್ರಾಮ, ʻಪವರ್‌ ಪಾಲಿಟಿಕ್ಸ್‌ʼ ಇಂದು ಕೂಡ ಕಂಟಿನ್ಯೂ ಆಗಿದೆ. ನಿನ್ನೆಯಿಂದ ತುಂಬಾ ಕೂಲ್‌ ಆಗಿದ್ದ ಸಿಎಂ ಉದ್ದವ್‌ ಠಾಕ್ರೆ ಇಂದು ಬಂಡಾಯ ಶಾಸಕರ ವಿರುದ್ದ ಕಿಡಿಕಾರಿದ್ದಾರೆ. ಅದರಲ್ಲೂ ಉದ್ದವ್‌ರನ್ನ ನಡುನೀರಿನಲ್ಲಿ ಬಿಟ್ಟು ಅತಂತ್ರರನ್ನಾಗಿ ಮಾಡಿದ ಏಕನಾಥ್‌ ಶಿಂಧೆ ವಿರುದ್ದ ಕೆಂಡ ಉಗುಳಿದ್ದಾರೆ. ʻಅವನು ಭಾಳಾ ಠಾಕ್ರೆಯ ಹೆಸರನ್ನ ದುರುಪಯೋಗ ಮಾಡಿಕೊಳ್ತಿದ್ದಾನೆ. ಅವರ ಮಗನನ್ನೇ MP ಮಾಡಿದ್ದಾನೆ. ನನ್ನ ಮಗನನ್ನ ಯಾಕೆ ಟಾರ್ಗೆಟ್‌ ಮಾಡ್ತಿದ್ದಾನೆ ಅಂತ ಪ್ರಶ್ನೆ ಮಾಡಿದ್ದಾರೆ. ಅಲ್ದೇ ಭಾಳಾ ರಾಕ್ರೆಯ ಹೆಸರು ಹೇಳದೆ ಅವರಿಗೆ ಉಳಿಗಾಲ ಇಲ್ಲ.. ಶಿವಸೇನೆಯನ್ನ ಒಡೆಯೋಕೆ ಪ್ರಯತ್ನ ಮಾಡ್ತಿದ್ದಾರೆ. ನಮ್ಮನ್ನ ತೊರೆದು ಹೋದವರ ಬಗ್ಗೆ ನಾನೇಕ್‌ ವ್ಯಥೆ ಪಡಲಿ. ಪಕ್ಷ ಬಿಡುವುದಂತಕ್ಕಿಂತ ಪ್ರಾಣ ಬಿಡೋದು ಲೇಸು ಅಂತಿದ್ದವರೆಲ್ಲಾ ಈಗ ಎಲ್ಲಿಗೋದ್ರು ಅಂತ ಅಸಮಾಧಾನ ಹೊರ ಹಾಕಿದ್ದಾರೆ. ಜೊತೆಗೆ ಬೇಕಾದ್ರೆ ನಾಯಕತ್ವ ಬದಲಾವಣೆ ಆಗಲಿ. ಅದನ್ನ ಬಿಟ್ಟು ಯಾವುದೇ ಕಾರಣಕ್ಕೂ ಮೈತ್ರಿ ಮುರಿದುಕೊಳ್ಳಲ್ಲ ಅಂತ ಹೇಳಿದ್ದಾರೆ. ಇತ್ತ ಶಕ್ತಿಯುತ ರಾಷ್ಟ್ರೀಯ ಪಕ್ಷವೊಂದು ನಮ್ಮನ್ನ ಬೆಂಬಲಿಸ್ತಿದೆ ಅಂತ ಹೇಳಿದ್ದ ಏಕನಾಥ್‌ ಶಿಂಧೆ ಇದೀಗ ಯಾವುದೇ ರಾಷ್ಟ್ರೀಯ ಪಕ್ಷ ನಮ್ಮ ಜೊತೆ ಕಾಂಟ್ಯಾಕ್ಟ್‌ ನಲ್ಲಿ ಇಲ್ಲ ಅಂತ U- ಟರ್ನ್‌ ಹೊಡೆದಿದ್ದಾರೆ. ಟಿವಿ ಮಾಧ್ಯಮವೊಂದು ಬಿಜೆಪಿ ನಿಮಗೆ ಬೆಂಬಲ ನೀಡ್ತಿದೆಯಾ? ಅಂತ ಕೇಳಿದಾಗ ಶಿಂಧೆ, ನಾನು ದೊಡ್ಡ ಶಕ್ತಿಯೊಂದು ನಮ್ಮ ಬೆನ್ನ ಹಿಂದೆ ಇದೆ ಅಂತ ಹೇಳಿದ್ದು. ಅಂದ್ರೆ ಬಾಳಾ ಸಾಹೇಬ್‌ ಠಾಕ್ರೆ ಮತ್ತು ಶಿವಸೇನೆಯ ಆನಂದ್‌ ದಿಘೆ ಅವ್ರ ಶಕ್ತಿ ಅಂತ ಮಾತನ್ನ ಬದಲಾಯಿಸಿದ್ದಾರೆ. ಇನ್ನು ಇಂದು ಕೂಡ ಶಿವಸೇನೆಯ ಮೂವರು ಶಾಸಕರು ಬಂಡಾಯದ ಗುಂಪು ಸೇರಿದ್ದಾರೆ ಅಂತ ಹೇಳಲಾಗಿದೆ. ಇನ್ನು ಜೂನ್‌ 20 ರಂದು ಥಾಣೆಯಲ್ಲಿ ಏಕನಾಥ್ ಶಿಂಧೆ ಆಯೋಜಿಸಿದ್ದ ಔತಣಕೂಟಕ್ಕೆ ಹೋಗಿದ್ದ ಶಿವಸೇನೆ ಶಾಸಕ ಕೈಲಾಸ್ ಪಾಟೀಲ್ ಮಾತನಾಡಿದ್ದು, ಕೆಲವರು ಒತ್ತಡಕ್ಕೆ ಮಣಿದು ಬಂಡಾಯ ಶಿಬಿರಕ್ಕೆ ಸಹಿ ಹಾಕ್ತಿದಾರೆ ಅಂತ ಆರೋಪಿಸಿದ್ದಾರೆ. ಸಿಎಂ ಯಾವುದೇ ನಿರ್ಧಾರ ತಗೊಳ್ಳಿ ನಾವು ಅವ್ರ ಜೊತೆಗಿದ್ದೇವೆ ಅಂತಾನೂ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply