ತಾಲಿಬಾನ್‌ ಉಗ್ರರ ಬೇಟೆಯಾಡಿದ ಪಾಕ್‌!

masthmagaa.com

ಇತ್ತೀಚೆಗೆ ಪಕ್ಕದ ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಾಗ್ತಿವೆ. ಈ ಹಿನ್ನಲೆಯಲ್ಲಿ ಪಾಕಿಸ್ತಾನ Counter Terrorism Department (CTD) ಕಾರ್ಯಾಚರಣೆ ನಡೆಸಿದ್ದು, ಐದು ಶಂಕಿತ ಉಗ್ರರನ್ನ ಅರೆಸ್ಟ್‌ ಮಾಡಿರೋದಾಗಿ ಹೇಳಿದೆ. ಗುಪ್ತಚರ ಇಲಾಖೆ ಮಾಹಿತಿ ಆಧಾರದ ಮೇಲೆ ಪಂಜಾಬ್‌ ಪ್ರಾಂತ್ಯದಲ್ಲಿ ಅತಿದೊಡ್ಡ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ TTP ಹಾಗೂ LeJ ಉಗ್ರಸಂಘಟನೆಗಳ ಜೊತೆ ಲಿಂಕ್‌ ಇರೋ ಐವರು ಉಗ್ರರನ್ನ ಬಂಧಿಸಲಾಗಿದೆ. ಬಂಧಿತ ಉಗ್ರರಿಂದ ಸ್ಫೋಟಕ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ ಅಂತ CTD ಹೇಳಿದೆ.

-masthmagaa.com

Contact Us for Advertisement

Leave a Reply