ಭಾರತ ಮತ್ತು ಚೀನಾ ಪ್ರಜೆಗಳಿಗೆ ಇನ್ಮುಂದೆ ವೀಸಾ ಬೇಡ: ಮಲೇಷ್ಯಾ

masthmagaa.com:

ಭಾರತ ಮತ್ತು ಚೀನಾ ಪ್ರಜೆಗಳು ಇನ್ಮುಂದೆ ಮಲೇಷ್ಯಾಗೆ ಹೋಗ್ಬೇಕಂದ್ರೆ ವೀಸಾ ಬೇಕಂತಿಲ್ಲ ಅಂತ ಮಲೇಷ್ಯಾ ಸರ್ಕಾರ ಘೋಷಿಸಿದೆ. ಮಲೇಷ್ಯಾದಲ್ಲಿ 30 ದಿನಗಳ ಕಾಲ ಉಳಿದುಕೊಳ್ಳೋಕೆ ಬರೋ ಭಾರತೀಯ ಮತ್ತು ಚೀನಾ ಪ್ರಜೆಗಳಿಗೆ ಮಾತ್ರ ವೀಸಾ-ಫ್ರೀ ಎಂಟ್ರಿ ನೀಡೋದಾಗಿ ಮಲೇಷ್ಯಾ ಪ್ರಧಾನಿ ಅನ್ವರ್‌ ಇಬ್ರಾಹಿಂ ಘೋಷಿಸಿದ್ದಾರೆ. ಈ ಹೊಸ ರೂಲ್ಸ್‌ ಡಿಸೆಂಬರ್‌ 1 ರಿಂದ ಜಾರಿಗೆ ಬರುತ್ತೆ ಅಂತ ಹೇಳಲಾಗಿದೆ. ಇನ್ನು ಈ ವೀಸಾ ವಿನಾಯಿತಿ ಎಷ್ಟು ಸಮಯದವರೆಗೆ ಇರಲಿದೆ ಅನ್ನೋ ಬಗ್ಗೆ ಅನ್ವರ್‌ ಇಬ್ರಾಹಿಂ ಮಾಹಿತಿ ಕೊಟ್ಟಿಲ್ಲ. ಮಲೇಷ್ಯಾ ಸರ್ಕಾರದ ಡೇಟಾ ಪ್ರಕಾರ, ಈ ವರ್ಷದ ಜನವರಿ ಮತ್ತು ಜೂನ್‌ ಮಧ್ಯದಲ್ಲಿ ಒಟ್ಟು 91.6 ಲಕ್ಷ ಜನ ಟೂರಿಸ್ಟ್‌ಗಳು ಮಲೇಷ್ಯಾಗೆ ಬಂದಿದ್ದಾರೆ. ಇದ್ರಲ್ಲಿ ಚೀನಾ ಟೂರಿಸ್ಟ್‌ಗಳ ಸಂಖ್ಯೆ 4,98,540 ಆಗಿದ್ರೆ, ಭಾರತೀಯ ಟೂರಿಸ್ಟ್‌ಗಳ ಸಂಖ್ಯೆ 2,83,885 ಇದೆ. ಹೀಗಾಗಿ ಮಲೇಷ್ಯಾದ ಪ್ರವಾಸೋದ್ಯಮ ಹೆಚ್ಚಿಸೋದಕ್ಕೆ ಅಲ್ಲಿನ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ಸದ್ಯ ಭಾರತ ಮತ್ತು ಚೀನಾ ಪ್ರಜೆಗಳು ಡಿಸೆಂಬರ್‌ 1ರ ತನಕ ಮಲೇಷ್ಯಾಗೆ ಹೋಗಬೇಕಾದ್ರೆ ವೀಸಾಗೆ ಅಪ್ಲೈ ಮಾಡ್ಬೇಕು. ಅಂದ್ಹಾಗೆ ಈ ಹಿಂದೆ ಥೈಲ್ಯಾಂಡ್‌ ಕೂಡ ತನ್ನ ಪ್ರವಾಸೋದ್ಯಮ ಹೆಚ್ಚಿಸೋದಕ್ಕೆ ಇದೇ ರೀತಿ ಕ್ರಮ ತೆಗೆದುಕೊಂಡಿತ್ತು. ಚೀನಾ ಮತ್ತು ಭಾರತದವರಿಗೆ ವೀಸಾ ಫ್ರೀ ಮಾಡಿತ್ತು.

-masthmagaa.com

Contact Us for Advertisement

Leave a Reply