ಸಂಘರ್ಷದ ಮಧ್ಯೆ ಚೀನಾಗೆ ಹಾರಿದ ಮಾಲ್ಡೀವ್ಸ್‌ ಅಧ್ಯಕ್ಷ ಮುಯ್ಜು!

masthmagaa.com:

ತನ್ನ ದೊಡ್ಡಣ್ಣನಂತಿರೋ ಭಾರತದ ವಿರುದ್ಧವೇ ಪುಂಡಾಟ ತೋರಿಸ್ತಿರೋ ಮಾಲ್ಡೀವ್ಸ್‌ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗ್ತಿವೆ. ಈ ವಿಚಾರಕ್ಕೆ ಈಗ ರಾಜಕೀಯ ತಿರುವು ಸಿಕ್ಕಿದ್ದು, ಉಭಯ ದೇಶಗಳ ರಾಜತಾಂತ್ರಿಕ ಯುದ್ಧಕ್ಕೆ ದಾರಿ ಮಾಡಿಕೊಟ್ಟಿದೆ. ಮಾಲ್ಡೀವ್ಸ್‌ ಸಚಿವರು ಪ್ರಧಾನಿ ಮೋದಿ ಹಾಗೂ ಭಾರತದ ವಿರುದ್ಧ ಅವಹೇಳನಕಾರಿ ಕಮೆಂಟ್‌ಗಳನ್ನ ಮಾಡಿದ ಬೆನ್ನಲ್ಲೇ, ವಿದೇಶಾಂಗ ಇಲಾಖೆ ಭಾರತದಲ್ಲಿರೋ ಮಾಲ್ಡೀವ್ಸ್‌ ಹೈ ಕಮಿಷನರ್‌ಗೆ ಸಮನ್ಸ್‌ ನೀಡಿತ್ತು. ಈ ಬೆನ್ನಲ್ಲೇ ಹೈ ಕಮಿಷನರ್‌ ಇಬ್ರಾಹಿಮ್‌ ಸಹೀಬ್‌ ಸೋಮವಾರ ಬೆಳಿಗ್ಗೆ ದೆಹಲಿಯ ವಿದೇಶಾಂಗ ಕಚೇರಿಗೆ ಭೇಟಿ ನೀಡಿದ್ರು. ಆದ್ರೆ ಭೇಟಿ ನೀಡಿದ ಕೆಲವೇ ನಿಮಿಷಗಳಲ್ಲಿ ಅವ್ರು ಕಚೇರಿಯಿಂದ ವಾಪಸ್‌ ಹೋಗಿದ್ದಾರೆ. ಬಹಳ ಕಡಿಮೆ ಟೈಮಲ್ಲಿ ಈ ಮೀಟಿಂಗ್‌ ಮುಗಿದಿದೆ. ಇದಾದ ಸ್ವಲ್ಪ ಹೊತ್ತಲ್ಲೇ ಮಾಲ್ಡೀವ್ಸ್‌ನಲ್ಲಿರೋ ಭಾರತೀಯ ಹೈ ಕಮಿಷನರ್‌ಗೆ ಅಲ್ಲಿನ ವಿದಾಶಾಂಗ ಇಲಾಖೆ ಸಮನ್ಸ್‌ ನೀಡಿದೆ. ಈ ರೀತಿ ರಾಜತಾಂತ್ರಿಕ ಮಟ್ಟದ ಜಿದ್ದಾಜಿದ್ದಿಗೆ ಈ ವಿವಾದ ಎಡೆ ಮಾಡಿಕೊಟ್ಟಿದೆ. ಆದ್ರೂ, ಇಂತಹಾ ಪರಿಸ್ಥಿತಿಯಲ್ಲೂ, ಚೀನಾ ಜೊತೆ ಸಾಲು ಸಾಲು ಒಪ್ಪಂದ ಮಾಡ್ಕೊಳ್ಳೋಕೆ ಮಾಲ್ಡೀವ್ಸ್ ತಯಾರಾಗಿದೆ. ಜನವರಿ 8ರಿಂದ 12ರವರೆಗೆ, ಐದು ದಿನ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮದ್‌ ಮುಯ್ಜು ಚೀನಾದಲ್ಲಿದ್ದು, ಅಲ್ಲಿನ ನಾಯಕರೊಂದಿಗೆ ಮಾತುಕತೆ ನಡೆಸಲು ತೆರಳಿದ್ದಾರೆ. ಈಗಾಗ್ಲೆ ಮುಯ್ಜು ಚೀನಾಕ್ಕೆ ಹಾರಿದ್ದು, ಅವ್ರನ್ನ ವೆಲ್ಕಮ್‌ ಮಾಡೋಕೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಬಹಳ ಉತ್ಸುಕರಾಗಿದ್ದಾರೆ. ಈ ಬಗ್ಗೆ ಚೀನಾ ವಿದೇಶಾಂಗ ವಕ್ತಾರ ವಾಂಗ್‌ ವೆನ್‌ಬಿನ್‌ ಮಾಹಿತಿ ನೀಡಿದ್ದಾರೆ. ಚೀನಾ ಮಾಲ್ಡೀವ್ಸ್‌ ಸಹಕಾರಕ್ಕೆ ಹೊಸ ಐತಿಹಾಸಿಕ ಒಪ್ಪಂದ ಶುರುವಾಗ್ಲಿದೆ. ಉಭಯ ದೇಶಗಳ ನಾಯಕರ ಮಾತುಕತೆಯಿಂದ ನಮ್ಮ ದ್ವಿಪಕ್ಷೀಯ ಸಂಬಂಧ ಇನ್ನೂ ಎತ್ತರಕ್ಕೆ ರೀಚ್‌ ಆಗುತ್ತೆ. ಅಲ್ಲದೆ ಇದೇ ವಿಚಾರವಾಗಿ ಉಭಯ ದೇಶಗಳು ಹಲವು ಅಗ್ರೀಮೆಂಟ್‌ಗಳಿಗೆ ಸೈನ್‌ ಮಾಡಲಿವೆ ಅಂತ ವಾಂಗ್‌ ಹೇಳಿದ್ದಾರೆ. ಇನ್ನು ಮಾಲ್ಡೀವ್ಸ್‌ಗೆ ಇದೀಗ ಭಾರತದ ಟ್ರಾವೆಲ್ಸ್‌ ಏಜೆನ್ಸಿಯೊಂದು ಬಿಗ್‌ ಶಾಕ್‌ ಕೊಟ್ಟಿದೆ. ಭಾರತದಿಂದ ಮಾಲ್ಡೀವ್ಸ್‌ಗೆ ತೆರಳೋ ತನ್ನ EaseMyTrip ಟ್ರಾವೆಲ್ಸ್‌ನ ಎಲ್ಲಾ ವಿಮಾನಗಳ ಬುಕ್ಕಿಂಗ್‌ನ್ನ ರದ್ದುಮಾಡಲಾಗಿದೆ ಅಂತ EaseMyTrip CEO ನಿಶಾಂತ್‌ ಪಿಟ್ಟಿ ಹೇಳಿದ್ದಾರೆ. “ನಮ್ಮ ದೇಶದೊಂದಿನ ಒಗ್ಗಟ್ಟು ಪ್ರದರ್ಶಿಸೋ ನಿಟ್ಟಿನಲ್ಲಿ ಮಾಲ್ಡೀವ್ಸ್‌ಗೆ ಹೋಗೋ ಎಲ್ಲಾ ವಿಮಾನಗಳ ಬುಕ್ಕಿಂಗ್‌ನ್ನ ರದ್ದು ಮಾಡಲಾಗಿದೆ ಅಂತ ತಿಳಿಸಿದ್ದಾರೆ. ಅಂದ್ಹಾಗೆ ಪ್ರಧಾನಿ ಮೋದಿ ವಿರುದ್ದ ಮಾಲ್ಡೀವ್ಸ್‌ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿ, ನೆಟ್ಟಿಗರ ಭಾರೀ ಟೀಕೆಗೆ ಗುರಿಯಾಗಿ ಕೊನೆಗೆ ಸಸ್ಪೆಂಡ್‌ ಕೂಡ ಆಗಿದ್ರು. ಇನ್ನು ಈ ಎಲ್ಲಾ ಬೆಳವಣಿಗೆಯಿಂದ ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಅಹಮ್ಮದ್ ಅದೀಬ್ ಬೇಸರಗೊಂಡಿದ್ದಾರೆ. ಮಾಲ್ಡೀವ್ಸ್ ಸಚಿವರ ಹೇಳಿಕೆ ಖಂಡಿಸಿದ ಅಹಮ್ಮದ್, ಮಾಲ್ಡೀವ್ಸ್ ಪರಿಸ್ಥಿತಿ ಇಲ್ಲಿಗೆ ತಲುಪಿರುವುದು ತೀವ್ರ ಬೇಸರವಾಗಿದೆ ಎಂದಿದ್ದಾರೆ. ಮಾಲ್ಡೀವ್ಸ್ ಕಟ್ಟುವಲ್ಲಿ ಬಾಲಿವುಡ್ ನಟ ನಟಿಯರ ಕೊಡುಗೆ ಇದೆ. ಮಾಲ್ಡೀವ್ಸ್ ಪ್ರವಾಸೋದ್ಯಮ ಈ ಮಟ್ಟಿಗೆ ಬೆಳೆಯಲು ಬಾಲಿವುಡ್ ನಟ ನಟಿಯರು ನೆರವಾಗಿದ್ದಾರೆ. ಇದೀಗ ಅದೇ ಬಾಲಿವುಡ್ ಸೆಲೆಬ್ರೆಟಿಗಳು ಮಾಲ್ಡೀವ್ಸ್ ವಿರುದ್ಧ ಕಮೆಂಟ್ ಮಾಡುತ್ತಿರುವುದು ನೋಡಿದರೆ ಬೇಸರವಾಗುತ್ತಿದೆ. ಪರಿಸ್ಥಿತಿ ಎಲ್ಲಿಗೆ ತಲುಪಿದೆ ಎಂದು ಅಹಮ್ಮದ್ ಪ್ರಶ್ನಿಸಿದ್ದಾರೆ. ಅಂದ್ಹಾಗೆ ಭಾರತ ಕಷ್ಟದ ಟೈಮ್ನಲ್ಲಿ ಹಲವು ಬಾರಿ ಮಾಲ್ಡೀವ್ಸ್‌ಗೆ ನೆರವು ನೀಡಿದೆ. ಸುನಾಮಿ, ಕೋವಿಡ್‌ ಹಾಗೂ ಕುಡಿಯೋ ನೀರಿಗೆ ಹಾಹಾಕಾರ ಇದ್ದ ಟೈಮಲ್ಲಿ ಬೆನ್ನಿಗೆ ನಿಂತಿದೆ. ಆದ್ರೆ ಈಗ ಅಧ್ಯಕ್ಷ ಮೊಹಮದ್‌ ಮುಯ್ಜುರ ಭಾರತ ವಿರೋಧಿ ಮೈಂಡ್‌ಸೆಟ್‌ನಿಂದ ಉಭಯ ದೇಶಗಳ ಸಂಬಂಧ ತೀರ ಹದಗೆಡೋ ಪರಿಸ್ಥಿತಿ ಎದುರಾಗಿದೆ. ಅಲ್ಲದೆ ಇದ್ರಿಂದ ಮಾಲ್ಡೀವ್ಸ್‌ ಭಾರಿ ದಂಡ ತೆರಬೇಕಾಗುತ್ತೆ. ಚೀನಾದ ಕುತಂತ್ರಿ ಬುದ್ಧಿ ತಿಳಿಯೋಕೆ ಮುಂಚೆ ಕಾಲ ಮೀರಿ ಮಾಲ್ಡೀವ್ಸ್‌ ತಕ್ಕ ಪಾಠ ಕಲಿಯುತ್ತೆ ಅಂತ ವಿಶ್ಲೇಷಿಸಲಾಗ್ತಿದೆ.

-masthmagaa.com

Contact Us for Advertisement

Leave a Reply