ಭಾರತವನ್ನ ಮರೆತ ಮಾಲ್ಡೀವ್ಸ್‌! ಟರ್ಕಿ ಜೊತೆ ಹೊಸ ಒಪ್ಪಂದ!

masthmagaa.com:

ಭಾರತೀಯ ಸೈನಿಕರನ್ನ ಮಾರ್ಚ್‌ 15ರೊಳಗೆ ಮಾಲ್ಡೀವ್ಸ್‌ನಿಂದ ಹೊರಹಾಕೋ ಅಲ್ಲಿನ ಸರ್ಕಾರದ ನಿರ್ಧಾರದ ಬೆನ್ನಲ್ಲೇ ಭಾರತ ಮಾಲ್ಡೀವ್ಸ್‌ ಜೊತೆ ಹೈಲೆವಲ್‌ಮೀಟಿಂಗ್‌ ನಡೆಸಿತ್ತು. ಇದೀಗ ಈ ಕುರಿತು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ರಿಯಾಕ್ಟ್‌ ಮಾಡಿದ್ದಾರೆ. ʻಉಭಯ ದೇಶಗಳಿಗೆ ಒಳ್ಳೆಯದಾಗೋ ಹಾಗೆ ಸಲ್ಯೂಷನ್‌ ಹುಡ್ಕೋಕೆ ಭಾರತ ಹರಸಾಹಸ ಪಡ್ತಿದೆ. ಜನವರಿ 14 ರಂದು ಎರಡೂ ದೇಶಗಳ ಪ್ರಮುಖ ಅಧಿಕಾರಿಗಳು ಸೇರಿ ಹೈ ಲೆವಲ್‌ ಮೀಟಿಂಗ್‌ ನಡೆಸಿದ್ದಾರೆ. ಡಿಸ್‌ಕಶನ್‌ ಇಲ್ಲಿಗೆ ಮುಗಿದಿಲ್ಲ, ಇನ್ನೂ ನಡೀತಲೇ ಇದೆ. ಸದ್ಯದಲ್ಲೇ ಎರಡನೇ ಹೈ ಲೆವಲ್‌ ಮೀಟಿಂಗ್‌ ನಡೆಯಲಿದೆ. ಆದ್ರೆ ಈ ಮೀಟಿಂಗ್‌ ನಂತ್ರ ಯಾವ್‌ ರೀತಿ ರಿಸಲ್ಟ್‌ ಹೊರ ಬೀಳಲಿದೆ ಅನ್ನೋ ಬಗ್ಗೆ ಮೊದಲೇ ಜಡ್ಜ್‌ ಮಾಡೋದ್‌ ಬೇಡʼ ಅಂದಿದ್ದಾರೆ.

ಇನ್ನು ಅತ್ತ ಮಾಲ್ಡೀವ್ಸ್‌-ಭಾರತ ರಾಜತಾಂತ್ರಿಕ ತಿಕ್ಕಾಟದ ನಡುವೆಯೇ ಉಭಯ ದೇಶಗಳ ವಿದೇಶಾಂಗ ಸಚಿವರು ಮುಖಾಮುಖಿಯಾಗಿದಾರೆ. ಉಗಾಂಡದ ಕಂಪಾಲದಲ್ಲಿ ನಡಿತಿರೋ ನಾನ್‌-ಅಲೈನ್ಡ್‌ ಮೂವ್‌ಮೆಂಟ್‌ (NAM) ಮೀಟಿಂಗ್‌ನಲ್ಲಿ ಜೈಶಂಕರ್‌ ಮಾಲ್ಡೀವ್ಸ್‌ನ ಮೂಸಾ ಜಮೀರ್‌ನನ್ನ ಮೀಟ್‌ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರೋ ಜೈಶಂಕರ್‌, ಮಾಲ್ಡೀವ್ಸ್‌ FMನ ಮೀಟ್‌ ಮಾಡಿದೆ. ಉಭಯ ದೇಶಗಳ ಸಂಬಂಧದ ಬಗ್ಗೆ ಒಂದು ʻಫ್ರ್ಯಾಂಕ್‌ʼ ಚರ್ಚೆನ ನಡಿಸೀದ್ವಿ ಅಂತ ಹೇಳಿದ್ದಾರೆ. ನಂತ್ರ ಟ್ವೀಟ್‌ ಮಾಡಿದ ಜಮೀರ್‌, ಅಂದ್ರೆ ಮಾಲ್ಡೀವ್ಸ್‌ FM, ಭಾರತದ ಸೇನೆ ವಾಪಸ್‌ ತಗೋಳೋ ಬಗ್ಗೆ ಚರ್ಚೆ ನಡೆಸಿದ್ವಿ. ಜೊತೆಗೆ ಆನ್‌ಗೋಯಿಂಗ್‌ ಪ್ರಾಜೆಕ್ಟ್‌ಗಳ ಬಗ್ಗೆ ಕೂಡ ಮಾತಾಡಿದ್ವೀ ಅಂತ ಹೇಳಿದ್ದಾರೆ.

ಇತ್ತ ಭಾರತ ತನ್ನ ಸೈನಿಕರು ಮಾಲ್ಡೀವ್ಸ್‌ನಲ್ಲಿ ಉಳಿದುಕೊಳ್ಳೋಕೆ ಟ್ರೈ ಮಾಡ್ತಿದ್ರೆ, ಅತ್ತ ಮಾಲ್ಡೀವ್ಸ್‌ ನೂತನ ಸರ್ಕಾರ ಬೇರೆ ದೇಶಗಳೊಂದಿಗೆ ಹೊಸ ಒಪ್ಪಂದಗಳಿಗೆ ಕೈ ಹಾಕ್ತಿದೆ. ಇತ್ತೀಚೆಗಷ್ಟೇ ಚೀನಾಗೆ ವಿಸಿಟ್‌ ಕೊಟ್ಟ ಮಾಲ್ಡೀವ್ಸ್‌ ಒಟ್ಟು 20 ಅಗ್ರೀಮೆಂಟ್‌ಗಳಿಗೆ ಸೈನ್‌ ಹಾಕಿತ್ತು. ಇದೀಗ ಭಾರತವನ್ನ ರಿಪ್ಲೇಸ್‌ ಮಾಡೋಕೆ ಟರ್ಕಿ ಜೊತೆ ಮತ್ತೊಂದು ಡೀಲ್‌ ಮಾಡ್ಕೊಂಡಿದೆ. 37 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 307.1 ಕೋಟಿ ರೂಪಾಯಿ ಡೀಲ್‌ಗೆ ಸೈನ್‌ ಹಾಕಿದೆ. ತನ್ನ ಸಮುದ್ರ ಭಾಗದಲ್ಲಿ ಕಣ್ಗಾವಲು ನಡೆಸೋಕೆ ಟರ್ಕಿಯಿಂದ ಸೇನಾ ಡ್ರೋನ್‌ ಖರೀದಿಸೋ ಡೀಲ್‌ ಇದಾಗಿದೆ. ಅಂದ್ಹಾಗೆ ಇಲ್ಲಿ ಗಮನಿಸ್ಬೇಕಾದ ಅಂಶವಂದ್ರೆ, ಇದೇ ಕೆಲಸವನ್ನ ಅಂದ್ರೆ ಮಾಲ್ಡೀವ್ಸ್‌ ಸುತ್ತ ಕಡಲಲ್ಲಿ ಗಸ್ತು ತಿರುಗೋ ಕೆಲಸವನ್ನ ಈ ಹಿಂದೆ ಭಾರತ ಮಾಡ್ತಿತ್ತು. ಯಾವ ಭಾರತೀಯ ಸೈನಿಕರನ್ನ ತನ್ನ ದೇಶದಿಂದ ಹೊರಹಾಕೋಕೆ ಮಾಲ್ಡೀವ್ಸ್‌ ಸ್ಕೆಚ್‌ ಹಾಕ್ತಿದ್ಯೋ, ಅದೇ ಸೈನಿಕರು ಅಲ್ಲಿನ ಜನರಿಗಾಗಿ, ಭದ್ರತೆಗಾಗಿ ಹೆಲಿಕಾಪ್ಟರ್ಸ್‌ ಮತ್ತು ಏರ್‌ಕ್ರಾಫ್ಟ್‌ನ್ನ ಆಪರೇಟ್‌ ಮಾಡ್ತಿದ್ರು. ಅಲ್ದೇ ಭಾರತೀಯ ಸೈನಿಕರು ಆಪರೇಟ್‌ ಮಾಡ್ತಿದ್ದ ಈ ಎರಡು ಧ್ರುವ್‌ ಅಡ್ವಾನ್ಸ್ಡ್‌ ಲೈಟ್‌ ಹೆಲಿಕಾಪ್ಟರ್ಸ್‌ ಮತ್ತು Dornier ಏರ್‌ಕ್ರಾಫ್ಟ್‌ನ್ನ ಖುದ್ದು ಭಾರತವೇ ಮಾಲ್ಡೀವ್ಸ್‌ಗೆ ಗಿಫ್ಟ್‌ ಮಾಡಿತ್ತು. ಜೊತೆಗೆ ಇದನ್ನ ಆಪರೇಟ್‌ ಮಾಡೋಕೆ ಮಾಲ್ಡೀವ್ಸ್‌ ಸೇನೆಗೆ ಟ್ರೈನಿಂಗ್‌ನ್ನ ಕೂಡ ನೀಡ್ತಿತ್ತು. ಇದೀಗ ಭಾರತೀಯರ ಜಾಗಕ್ಕೆ, ಮಾಲ್ಡೀವ್ಸ್‌ ಟರ್ಕಿಯನ್ನ ತಂದು ಕೂರಿಸ್ಬಿಟ್ಟಿದೆ. ಟರ್ಕಿಯ ಅಕ್ಸುಂಗುರ್‌ ಡ್ರೋನ್‌ನ್ನ ಗಸ್ತು ತಿರುಗೋಕೆ ಬಿಡಲಿದೆ.

-masthmagaa.com

Contact Us for Advertisement

Leave a Reply