ಬಂಗಾಳದಲ್ಲಿ ಕೈ ಯಾತ್ರೆ: ಸಿಎಂ ಮಮತಾ ಬ್ಯಾನರ್ಜಿ ಓಲೈಕೆಗೆ ಮುಂದಾದ ಖರ್ಗೆ!

masthmagaa.com:

ಕಾಂಗ್ರೆಸ್‌ನ ಭಾರತ ಜೊಡೋ ನ್ಯಾಯ ಯಾತ್ರೆ ಪಶ್ಚಿಮ ಬಂಗಾಳಕ್ಕೆ ಕಾಲಿಡ್ತಿದ್ದಂತೆ ಆಡಳಿತರೂಢ ಟಿಎಂಸಿ ಪಕ್ಷ ಅಂತರ ಕಾಯ್ದುಕೊಂಡಿತ್ತು. ಇದ್ರ ಬೆನ್ನಲ್ಲೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಜೊತೆ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತುಕತೆ ನಡೆಸಿದ್ದಾರೆ. ಸದ್ಯ ಬಂಗಾಳದಲ್ಲಿ ಏಕಾಂಗಿ ಸ್ಪರ್ಧೆ ಮಾಡೋದಾಗಿ ಟಿಎಂಸಿ ಅನೌನ್ಸ್‌ ಮಾಡಿದೆ. ರಾಹುಲ್‌ರ ಯಾತ್ರೆಯಿಂದ ದೂರ ಸರಿದಿರೋ ದಿದೀಯವ್ರ ಓಲೈಕೆಗೆ ಖರ್ಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಮೂಲಕ INDI ಮೈತ್ರಿ ಕೂಟದಿಂದ TMC ಹೊರಹೋಗದಂತೆ ತಡೆಯಲು ಕಾಂಗ್ರೆಸ್‌ ಹವಣಿಸ್ತಿದೆ ಅಂತ ವಿಶ್ಲೇಷಿಸಲಾಗ್ತಿದೆ. ಮತ್ತೊಂದೆಡೆ ಪಶ್ಚಿಮ ಬಂಗಾಳದ ಹೌರಾದಲ್ಲಿ ಜನವರಿ 25ರ ತಡರಾತ್ರಿ ಅಂದ್ರೆ ನಿನ್ನೆ ಕೋಮು ಗಲಭೆ ಉಂಟಾಗಿ 24 ಜನ ಗಾಯಗೊಂಡಿದ್ದಾರೆ. ಈಗ ಈ ಸ್ಥಳದಲ್ಲಿ ಪೋಲಿಸರು 144 ಸೆಕ್ಷನ್‌ ಜಾರಿ ಮಾಡಿದ್ದಾರೆ.

ಇನ್ನೊಂದೆಡೆ INDI ಮೈತ್ರಿ ಕೂಟದಿಂದ ಬಿಹಾರ್‌ ಸಿಎಂ ನಿತೀಶ್‌ ಕುಮಾರ್‌ ಇತ್ತೀಚಿಗಷ್ಟೇ ದೂರ ಸರಿದಿದ್ರು. ಇದೀಗ ನಿತೀಶ್ ಮಹಾಘಟಬಂಧನಕ್ಕೆ ವಿದಾಯ ಹೇಳಿ ಬಿಜೆಪಿ ಜೊತೆ ಸರ್ಕಾರ ರಚಿಸ್ತಾರೆ. ಜನವರಿ 28ಕ್ಕೆ ಬಿಹಾರ್‌ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಅಂತೇಳಲಾಗ್ತಿದೆ. ನಿತೀಶ್‌ ಜೊತೆ DCM ಆಗಿ ಬಿಜೆಪಿಯ ಸುಶೀಲ್‌ ಕುಮಾರ್‌ ಮೋದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಅಂತ ತಿಳಿದು ಬಂದಿದೆ.

ಇತ್ತ ನಿತೀಶ್‌ INDI ಮೈತ್ರಿ ಕೂಟದಲ್ಲಿ ಉಳಿದಿದ್ದರೆ ಪ್ರಧಾನಿಯಾಗಬಹುದಿತ್ತು ಅಂತ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೇಳಿದ್ದಾರೆ. ನಿತೀಶ್‌ ಕುಮಾರ್‌ ಅವ್ರ ಕುಂದು ಕೊರತೆ ಏನಿದೆ ಅಂತ ಕೇಳ್ಬೇಕಿತ್ತು. ಕೇಳಿದ್ರೆ ಏನಾದ್ರು ಸೊಲ್ಯುಷನ್‌ ಸಿಕ್ಕಿರೋದು ಅಂದಿದ್ದಾರೆ. I.N.D.I ಒಕ್ಕೂಟದ ಬಗ್ಗೆ ಚಾಟಿ ಬೀಸಿರೋ ಅಖಿಲೇಶ್‌, ಕಾಂಗ್ರೆಸ್‌ನಲ್ಲಿ ಮುಂಚೆ ಇದ್ದ ಉತ್ಸಾಹ ಈಗಿಲ್ಲ. ಒಕ್ಕೂಟವನ್ನ ಒಂದುಗೂಡಿಸೋಕೆ ಪಕ್ಷ ಮುಂದೆ ಬರ್ಬೇಕಿತ್ತು. ಆ ಪ್ರಯತ್ನ ಕಾಣ್ತಿಲ್ಲ ಅಂದಿದ್ದಾರೆ. ಅತ್ತ ಹರ್ಯಾಣದಲ್ಲಿ ಆಮ್‌ ಆದ್ಮಿ ಪಾರ್ಟಿ ಏಕಾಂಗಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತೆ ಅನ್ನೋ ವಿಚಾರ ತಿಳಿದು ಬಂದಿದೆ. ಆಪ್‌ ರಾಜ್ಯಾಧ್ಯಕ್ಷ ಸುಶೀಲ್‌ ಗುಪ್ತ ಈ ವಿಚಾರವನ್ನ ಅನೌನ್ಸ್‌ ಮಾಡಿದ್ದಾರೆ. ಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯನ್ನ ಏಕಾಂಗಿಯಾಗಿ ಎದುರಿಸ್ತೀವಿ. ಇದನ್ನ ಆಪ್‌ ಚೀಫ್‌ ಅರವಿಂದ್‌ ಕೇಜ್ರಿವಾಲ್‌ ಹಾಗೂ ಇತರ ನಾಯಕರು ಒಪ್ತಾರೆ ಅಂತೇಳಿದ್ದಾರೆ. ಇನ್ನು ಅತ್ತ ಆಮ್‌ ಆದ್ಮಿ ಪಾರ್ಟಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವ್ರ ಭಾರತ್‌ ಜೋಡೋ ನ್ಯಾಯ ಯಾತ್ರೆ ಬಗ್ಗೆ ಕೂಡ ಕಮೆಂಟ್‌ ಮಾಡಿದೆ. ಚುನಾವಣೆಗೆ ಕೆಲವೇ ದಿನಗಳು ಇರುವಾಗ ರಾಹುಲ್‌ ಗಾಂಧಿ ಪಿಕ್‌ನಿಕ್‌ಗೆ ಹೋಗಿದ್ದಾರೆ ಅಂತ ಕಾಲೆಳೆದಿದೆ.

-masthmagaa.com

Contact Us for Advertisement

Leave a Reply