ಮಮತಾ ಸರ್ಕಾರಕ್ಕೆ ʻOBCʼ ಹೊಡೆತ ಕೊಟ್ಟ ಕಲ್ಕತ್ತಾ ಹೈಕೋರ್ಟ್!

masthmagaa.com:

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ. 2010ರಿಂದ ಆಡಳಿತಾರೂಢ ಮಮತಾ ಬ್ಯಾನರ್ಜಿ ಅವ್ರ ಸರ್ಕಾರ ನೀಡಿದ್ದ OBC ಪ್ರಮಾಣ ಪತ್ರಗಳನ್ನ ರದ್ದುಗೊಳಿಸೊದಾಗಿ ಕಲ್ಕತ್ತಾ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ. ಅಂದ್ರೆ ಮೀಸಲಾತಿ ಸೇರಿದಂತೆ ಇತರ ಸೌಲಭ್ಯಗಳಿಗೆ ಒಳಗೊಂಡಂತೆ OBC ಪಟ್ಟಿಗೆ ಸೇರಿಸಿ ಸಾರ್ವಜನಿಕರಿಗೆ ನೀಡಲಾದ OBC ಪ್ರಮಾಣ ಪತ್ರಗಳನ್ನ ರದ್ದು ಮಾಡೊದಾಗಿ ಕೋರ್ಟ್‌ ಹೇಳಿದೆ. 2010ರಿಂದ ಬಂಗಾಳದಲ್ಲಿ ಅಕ್ರಮವಾಗಿ OBC ಪ್ರಮಾಣಪತ್ರಗಳನ್ನ ನೀಡಲಾಗಿದೆ.. 2012ರ 2H, 5,6,16 ಸೆಕ್ಷನ್‌ಗಳನ್ನ ಸರ್ಕಾರ ಉಲ್ಲಂಘಿಸಿದೆ ಅಂತ ಕೋರ್ಟ್‌ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಇದರ ಬೆನ್ನಲ್ಲೇ ʻಕೋರ್ಟ್‌ ನಿರ್ಧಾರವನ್ನ ಒಪ್ಪಿಕೊಳ್ಳೊದಿಲ್ಲ ಅಂತ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply