ಮಮತಾ ಬ್ಯಾನರ್ಜಿ ಬಿದ್ದು ಗಾಯ! ಆಸ್ಪತ್ರೆಗೆ ದಾಖಲು!

masthmagaa.com:

ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವ್ರು ಇದೀಗ ತಮ್ಮ ನಿವಾಸದಲ್ಲಿ ಏಕಾಏಕಿ ಬಿದ್ಬಿಟ್ಟು ಪಜೀತಿ ಮಾಡ್ಕೊಂಡಿದ್ದಾರೆ. ತಮ್ಮ ಹಣೆ…ಮೂಗಿಗೆಲ್ಲಾ ಗಾಯ ಮಾಡ್ಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವ್ರು ಬಿದ್ದು ಪೆಟ್ಟು ಮಾಡ್ಕೊಂಡಿರೋ ವರದಿ ಹೊರ ಬೀಳ್ತಲೆ ಕೆಲ ಊಹಾಪೋಹಗಳು ಹುಟ್ಕೊಂಡ್ವು. ಯಾಕಂದ್ರೆ ಇವ್ರನ್ನ ಯಾರೋ ಹಿಂದಿನಿಂದ ಬಂದು ದೂಡಿದ್ದಾರೆ…ಅದಕ್ಕೆ ಮಮತಾ ಬ್ಯಾನರ್ಜಿ ಬಿದ್ದು ಗಾಯ ಮಾಡ್ಕೊಂಡ್ರು ಅಂತೆಲ್ಲಾ ಹೇಳಲಾಗಿತ್ತು. ಆದ್ರೆ ಇದ್ರ ಬಗ್ಗೆ ಕ್ಲಾರಿಟಿ ಕೊಟ್ಟಿರೋ ಅವ್ರ ಡಾಕ್ಟರ್‌, ʻಅವ್ರಿಗೆ ಹಿಂದಿಂದ ಬಂದು ದೂಡಿದಂತಾಯ್ತು…ಅದೊಂದು ರೀತಿ ಸೆನ್ಸೇಷನ್‌ ಅಷ್ಟೆ. ಅದಕ್ಕೆ ಬಿದ್ದು ಏಟು ಮಾಡ್ಕೊಂಡಿದ್ದಾರೆ. ನಾನ್‌ ಈ ರೀತಿ ಹೇಳಿರೋದನ್ನ ತಪ್ಪಾಗಿ ಅರ್ಥೈಸಲಾಗಿದೆʼ ಅಂತ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply