ಪಾರ್ಥ ಚಟರ್ಜಿಯವರ ಬ್ರಹ್ಮಾಂಡ ಭ್ರಷ್ಟಾಚಾರ! ಕೋಟಿ ಕೋಟಿ ಹಣ, ಕೆಜಿ ಗಟ್ಟಲೆ ಚಿನ್ನ ಪತ್ತೆ!

masthmagaa.com:

ನಮ್ಮ ದೇಶದಲ್ಲಿ ಭ್ರಷ್ಟಾಚಾರ, ಹಗರಣಗಳು ಅನ್ನೋದು ಎಷ್ಟರ ಮಟ್ಟಿಗೆ ಇದೆ ಅನ್ನೋದನ್ನ ನಾವು ಪ್ರತ್ಯೇಕವಾಗಿ ಹೇಳ್ಬೇಕಿಲ್ಲ. ರಾಜಕೀಯ ಅನ್ನೋದೆ ಒಂದು ರೀತಿ ದುಡ್ಡು ಮಾಡೋ ದಂಧೆ ಅನ್ನೋದನ್ನ ನಮ್ಮ ದೇಶದಲ್ಲಿರೋ ಬಹುತೇಕ ಪಕ್ಷಗಳು, ಅದರಲ್ಲಿರೋ ಸೋ ಕಾಲ್ಡ್‌ ಜನಸೇವಕರು ತೋರಿಸಿಕೊಟ್ಟಿದ್ದಾರೆ. ಅಂತಹ ಅದೆಷ್ಟೋ ಪ್ರಕರಣಗಳ ಸಾಲಿಗೆ ಈಗ ಪಶ್ಚಿಮ ಬಂಗಾಳದ ಪ್ರಕರಣ ಕೂಡ ಸೇರ್ಕೊಂಡಿದೆ.ನಾವು ಕಳೆದ ನಾಲ್ಕೈದು ದಿನಗಳಿಂದ ವರದಿ ನೀಡ್ತಾನೇ ಇದ್ದೀವಿ. ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಮಾಡಲಾಗಿದೆ ಅಂತ ಬಂಧಿಯಾಗಿರೋ ವೆಸ್ಟ್‌ ಬೆಂಗಾಲ್‌ ಮಿನಿಸ್ಟರ್‌ ಪಾರ್ಥ ಚಟರ್ಜಿಯವರ ಬ್ರಹ್ಮಾಂಡ ಭ್ರಷ್ಟಾಚಾರ ಬಗೆದಷ್ಟು ಆಳ, ಅಗಲಕ್ಕೆ ಹೋಗ್ತಾನೆ ಇದೆ. ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಮುಖರ್ಜಿ ಅವರ ಆಸ್ತಿ ಮೇಲೆ ದಾಳಿ ಮಾಡಿದ ಇ.ಡಿ ಅಧಿಕಾರಿಗಳಿಗೆನೇ ಶಾಕ್‌ ಆಗಿದ್ದು ಸಂಪತ್ತಿನ ಕೋಟೆಯೇ ತೆರೆದುಕೊಂಡಿದೆ. ಹೊಸದಾಗಿ 27.9 ಕೋಟಿ ರೂ. ನಗದು, ಕೆಜಿಗಟ್ಟಲೆ ಚಿನ್ನ ಹಾಗೂ ಅಪಾರ ಪ್ರಮಾಣದ ಆಸ್ತಿ ದಾಖಲೆಗಳು ಪತ್ತೆಯಾಗಿವೆ. ಜೊತೆಗೆ ಸಿಕ್ಕಿರೋ ಬಂಗಾರದ ಮೌಲ್ಯ ಎಷ್ಟಿದೆ ಅನ್ನೋದ್ರ ಬಗ್ಗೆ ಸರಿಯಾದ ನಿರ್ಧಾರಕ್ಕೆ ಬರೋಕೆ ಸಾಧ್ಯವಾಗಿಲ್ಲ..ಇನ್ನು ಎಷ್ಟಿದೆ ಅನ್ನೋದು ಕೌಂಟಿಂಗ್‌ ಮಾಡಿದ್ಮೇಲೆನೆ ಗೊತ್ತಾಗುತ್ತೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಕೊಲ್ಕತ್ತಾದ ಬೆಲ್ಗಾರಿಯಾದ ಅಪಾರ್ಟ್‌ಮೆಂಟ್‌ನಲ್ಲಿ ಈ ಸಂಪತ್ತಿನ ಖಜಾನೆ ಪತ್ತೆಯಾಗಿದೆ. ಇನ್ನುಒಂದು ವಿಚಾರ ಅಂದ್ರೆ ಈ ದುಡ್ಡಿದ್ದ ಅಪಾರ್ಟ್‌ ಮೆಂಟ್‌ನ ಬಾಡಿಗೆನೇ ಇನ್ನೂ ಕಟ್ಟಿರಲಿಲ್ಲವಂತೆ. ಹಾಗಂತ ಕೂಡ ಮಾಹಿತಿ ಸಿಕ್ತಿದೆ. ಈ ಮೂಲಕ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಖರ್ಜಿಯ ಕೇವಲ ಎರಡು ಮನೆಗಳಿಂದಲೇ ಒಟ್ಟಾರೆ ವಶಪಡಿಸಿಕೊಂಡ ಹಣದ ಮೌಲ್ಯ ಸುಮಾರು 50 ಕೋಟಿಗೆ ಏರಿಕೆಯಾಗಿದೆ. ಇತ್ತ ಇಷ್ಟೆಲ್ಲಾ ಆದ್ಮೇಲೆ ಕಡೆಗೂ ಪಾರ್ಥ ಚಟರ್ಜಿಯವರನ್ನ ಟಿಎಂಸಿ ಪಕ್ಷದಿಂದಲೇ ಉಚ್ಚಾಟನೆ ಮಾಡಲಾಗಿದೆ. ಈ ಮೊದಲು ಸಿಎಂ ಮಮತಾ ಬ್ಯಾನರ್ಜಿ ಈ ಆರೋಪಿತ ಸಚಿವನನ್ನ ಸಂಪುಟದಿಂದ ಕೈಬಿಟ್ಟು ಹುದ್ದೆಯಿಂದ ವಜಾಗೊಳಿಸಿದ್ರು. ಬಳಿಕ ಮಾತನಾಡಿದ್ದ ಮಮತಾ ನಮ್ಮ ಪಾರ್ಟಿ ತುಂಬಾ ಸ್ಟ್ರಿಕ್ಟ್‌ ಅಂತ ಹೇಳಿದ್ರು. ಅಂದ್ಹಾಗೆ ಪಾರ್ಥ ಚಟರ್ಜಿಯ ಈ ಕೃತ್ಯದಿಂದ ನಮಗೆ ತುಂಬಾ ಅವಮಾನ ಮತ್ತು ಮುಜುಗರವಾಗಿದೆ..ಅವರನ್ನ ವಜಾಗೊಳಿಸ್ಬೇಕು ಅಂತ ಸ್ವಪಕ್ಷದಲ್ಲಿ ಕೂಡ ಅನೇಕ ನಾಯಕರು ವ್ಯಾಪಕ ಆಕ್ರೋಶ ಹೊರ ಹಾಕಿದ್ರು.

-masthmagaa.com

Contact Us for Advertisement

Leave a Reply