ಮಮತಾ ಮಾಸ್ಟರ್‌ ಸ್ಟ್ರೋಕ್:‌ ನರೇಗಾ ಬಾಕಿ ನಾನೇ ಕೊಡ್ತೀನಿ

masthmagaa.com:

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಕೇಂದ್ರ ಸರ್ಕಾರ ಉಳಿಸಿಕೊಂಡಿರೋ MGNREGA ಹಣವನ್ನ ರಾಜ್ಯ ಸರ್ಕಾರ ಕೊಡುತ್ತೆ ಅಂತ ಅನೌನ್ಸ್‌ ಮಾಡಿದ್ದಾರೆ. ಬರೋಬ್ಬರಿ 21 ಲಕ್ಷ ನರೇಗಾ ಕೆಲಸಗಾರರಿಗೆ ನಾವು ಹಣ ಕೊಡ್ತೀವಿ ಅಂತ ಮಮತಾ ಹೇಳಿದ್ದಾರೆ. ಕಳೆದ 2 ವರ್ಷಗಳಿಂದ ಬಾಕಿ ಉಳಿದಿರೋ ಹಣ ಫೆಬ್ರವರಿ 21ರ ಒಳಗೆ ಜನರ ಬ್ಯಾಂಕ್‌ ಅಕೌಂಟ್‌ಗಳಿಗೆ ತಲುಪುತ್ತೆ ಅಂದಿದ್ದಾರೆ. ನಿನ್ನೆಯಷ್ಟೇ ಮಮತಾ ಕೇಂದ್ರ ಸರ್ಕಾರ ಉಳಿಸಿಕೊಂಡಿರೋ ಹಣವನ್ನ ಕೊಡ್ಬೇಕು ಅಂತ ಎರಡು ದಿನಗಳ ಪ್ರತಿಭಟನೆ ಅನೌನ್ಸ್‌ ಮಾಡಿದ್ರು. ಅಲ್ಲದೆ CAG ರಿಪೋರ್ಟನ್ನ ನಿರಾಕರಿಸಿ ಪಿಎಂ ಮೋದಿಗೆ ಪತ್ರ ಬರೆದಿದ್ರು. ಈ ತಪ್ಪಾದ ರಿಪೋರ್ಟ್‌ ಜನರನ್ನ ಮಿಸ್ಲೀಡ್‌ ಮಾಡುತ್ತೆ. ರಾಜ್ಯ ಆಡಳಿತ ಯಂತ್ರದ ವಿರುದ್ಧ ಸುಳ್ಳು ಪ್ರಚಾರವನ್ನ ಮಾಡೋಕೆ ಬಳಕೆಯಾಗುತ್ತೆ ಅಂತ ಆರೋಪಿಸಿದ್ರು. ಇದೀಗ ನರೇಗಾ ಬಾಕಿಯನ್ನ ನಾವೆ ಕೊಡ್ತೀವಿ ಅಂತ ಕೇಂದ್ರ ಸರ್ಕಾರಕ್ಕೆ ಮುಜುಗರ ಆಗುವಂತ ಕೆಲಸ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply