ವಿಮಾನದಲ್ಲಿ ಬೀಡಿ ಸೇದಿದ ಪ್ರಯಾಣಿಕ! ಎಳೆದುಕೊಂಡು ಪೊಲೀಸ್‌ಗೆ ಒಪ್ಪಿಸಿದ ಸಿಬ್ಬಂದಿ!

masthmagaa.com:

ಅಹಮದಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ವ್ಯಕ್ತಿಯೊಬ್ಬರು ಬೀಡಿ ಸೇದು ಅರೆಸ್ಟ್‌ ಆಗಿದ್ದಾರೆ. ಆರೋಪಿಯನ್ನ ಪ್ರವೀಣ್‌ಕುಮಾರ್‌ ಅಂತ ಗುರುತಿಸಲಾಗಿದೆ. ಈತ ಆಕಾಶ್‌ ಏರ್‌ಲೈನ್ಸ್‌ ಸಂಸ್ಥೆಯ ಕ್ಯೂಪಿ-1326 ವಿಮಾನದಲ್ಲಿ ಬೆಂಗಳೂರಿಗೆ ಬರ್ತಿದ್ರು. ಮಾರ್ಗಮಧ್ಯೆ ಏರೋಪ್ಲೇನ್‌ ಟಾಯ್ಲೆಟ್‌ನಲ್ಲಿ ಬೀಡಿ ಸೇದಿದ್ದಾರೆ. ಹೊಗೆ ಬರ್ತಿದ್ದದನ್ನ ಗಮನಿಸಿದ ಸಿಬ್ಬಂದಿ ಪರಿಶೀಲನೆ ಮಾಡಿದಾಗ ಈ ಹೊಗೆ ರಹಸ್ಯ ಬೆಳಕಿಗೆ ಬಂದಿದೆ. ಬೆಂಗಳೂರು ಏರ್ಪೋರ್ಟ್‌ನಲ್ಲಿ ವಿಮಾನ ಲ್ಯಾಂಡ್‌ ಆಗ್ತಿದ್ದಂತೆ ಪ್ರವೀಣ್‌ಕುಮಾರ್‌ನನ್ನು ಭದ್ರತಾ ಪಡೆಗೆ ಒಪ್ಪಿಸಿದ್ದಾರೆ.

-masthmagaa.com

Contact Us for Advertisement

Leave a Reply