ಪ್ಯಾಲಸ್ತೀನ್‌ ಪರ ಪ್ರತಿಭಟನೆ ವೇಳೆ ಮೊಳಗಿದ ಜೈ ಶ್ರೀರಾಮ ಘೋಷಣೆ!

masthmagaa.com:

ಗಾಜಾದಲ್ಲಿ ಯುದ್ದ ನಡಿತಿದ್ರೆ ಅದನ್ನ ಖಂಡಿಸಿ ಅಮೆರಿಕದ ಪ್ರತಿಷ್ಠಿತ ಯುನಿವರ್ಸಿಟಿಗಳಲ್ಲಿ ಪ್ಯಾಲಸ್ತೀನ್‌ ಪರ ಪ್ರತಿಭಟನೆಗಳು ಜೋರಾಗ ತೊಡಗಿವೆ. ಇದ್ರ ಭಾಗವಾಗಿ ಲಾಸ್‌ ಏಂಜಲೀಸ್‌ನ ಕ್ಯಾಲಿಪೋರ್ನಿಯಾ ಯುನಿವರ್ಸಿಟಿಯಲ್ಲಿ ಪ್ರತಿಭಟನೆ ವೇಳೆ ವಿದೇಶಿ ವಿದ್ಯಾರ್ಥಿಯೊಬ್ಬ ಜೈ ಶ್ರೀರಾಮ ಅಂತ ಘೋಷಣೆ ಕೂಗಿದ್ದು, ಈ ಬಗೆಗಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ಭಾರಿ ಸದ್ದು ಮಾಡ್ತಿದೆ. ಅಂದ್ಹಾಗೆ ಈತ ಮೂಲತಃ ಪಾಕಿಸ್ತಾನದ ಇನ್‌ಫ್ಲುವೆನ್ಸರ್‌ ಶಯನ್‌ ಅಲಿ ಆಗಿದ್ದು, ISI ಮತ್ತು ಪಾಕ್‌ ಏಜೆನ್ಸಿಗಳ ಕಿರುಕುಳದಿಂದ ತಾನು ಹಿಂದೂ ಧರ್ಮಕ್ಕೆ ಕನ್ವರ್ಟ್‌ ಆಗಿದ್ದಾಗಿ ಹೇಳಿಕೊಂಡಿದ್ದಾನೆ. ಅಲ್ಲದೇ ತನ್ನ ಹೆಸರನ್ನ ಕೂಡ ಶಯನ್‌ ಕೃಷ್ಣ ಅಂತ ಬದಲಾಯಿಸಿಕೊಂಡಿದ್ದಾನೆ. ತನ್ನ ಪ್ರೊಫೈಲ್‌ನಲ್ಲಿ ಹಲವಾರು ಸಲ ಬಿಜೆಪಿ ಶಾಲು ಹಾಕಿಕೊಂಡು ಪೋಸ್ಟ್‌ ಹಾಕಿದ್ದಾನೆ.

-masthmagaa.com

Contact Us for Advertisement

Leave a Reply