ಬಿಹಾರ್‌ ಕಾಂಗ್ರೆಸ್‌ ಶಾಸಕಿಯ ಮನೆಯಲ್ಲಿ ವ್ಯಕ್ತಿಯೊಬ್ಬನ್ನ ಮೃತದೇಹ ಪತ್ತೆ! ಆಗಿದ್ದೇನು?

masthmagaa.com:

24 ವರ್ಷದ ವ್ಯಕ್ತಿಯೊಬ್ಬನ ಮೃತದೇಹ ಬಿಹಾರ್‌ನ ಕಾಂಗ್ರೆಸ್‌ ಶಾಸಕಿಯಾದ ನೀತು ಸಿಂಗ್‌ ಅವ್ರ ಮನೆಯಲ್ಲಿ ಶನಿವಾರ ಅಂದ್ರೆ ನೆನ್ನೆ ಪತ್ತೆಯಾಗಿದೆ. ಮೃತಪಟ್ಟ ವ್ಯಕ್ತಿಯನ್ನ ಪಿಯೂಷ್‌ ಸಿಂಗ್‌ ಅಂತ ಗುರುತಿಸಲಾಗಿದ್ದು, ಈತ ನೀತು ಸಿಂಗ್‌ ಅವ್ರ ದೂರದ ಸಂಬಂಧಿಕನಾಗಿದ್ದಾನೆ. ಆದ್ರೆ ಮೃತದೇಹ ಪತ್ತೆಯಾಗಿರೋ ದಿನದಂದು, ಬಿಹಾರ್‌ನ ನವಾದ ಜಿಲ್ಲೆಯಲ್ಲಿರೋ ಮನೆಯಲ್ಲಿ ನೀತು ಸಿಂಗ್‌ ಇರಲಿಲ್ಲವಿತ್ತು ಅಂತ ನವಾದ ಎಸ್‌ಪಿ ಅಂಬ್ರೀಷ್‌ ರಾಹುಲ್‌ ಅವ್ರು ತಿಳಿಸಿದ್ದಾರೆ. ನೀತು ಸಿಂಗ್‌ ಅವ್ರು ಕೆಲ ದಿನಗಳ ಹಿಂದೆ ತಮ್ಮ ಮನೆಯಿಂದ ದೂರ ಪಾಟ್ನದಲ್ಲಿದ್ರು ಮತ್ತು ಅವ್ರ ಫ್ಯಾಮಿಲಿ ಕೂಡ ಈ ಘಟನೆಯಾದಾಗ ಮನಯಲ್ಲಿ ಇರಲಿಲ್ಲ ಎನ್ನಲಾಗಿದೆ. ಪ್ರಾರಂಭಿಕ ತನಿಖೆಯಲ್ಲಿ, ನೀತು ಸಿಂಗ್‌ನ ಮೈದುನನ ಮಗ ಗೋಲು ಸಿಂಗ್‌ ಅವ್ರ ಮೇಲೆ ಪೊಲೀಸರಿಗೆ ಡೌಟ್‌ ಹುಟ್ಟಿಕೊಂಡಿದೆ. ಸದ್ಯ ಹೆಚ್ಚಿನ ತನಿಖೆಯನ್ನ ನಡೆಸಿ ಆರೋಪಿಯನ್ನ ಸೆರೆ ಹಿಡಿಯೋದರಲ್ಲಿ ಪೊಲೀಸ್‌ ನಿರತರಾಗಿದ್ದಾರೆ.

-masthmagaa.com

Contact Us for Advertisement

Leave a Reply