‌ಪ್ರಾನ್ಸ್‌ನಲ್ಲಿ ಜರ್ಮನ್‌ ಪ್ರವಾಸಿಗನ ಕೊಲೆ: ಉಗ್ರರ ದಾಳಿ ಎಂದ ಪ್ರಾನ್ಸ್‌ ಅಧ್ಯಕ್ಷ!

masthmagaa.com:

ವ್ಯಕ್ತಿಯೊಬ್ಬ ಜರ್ಮನ್‌ ಪ್ರವಾಸಿಗನನ್ನು ಸುತ್ತಿಗೆ ಹಾಗೂ ಚಾಕುವಿನಿಂದ ಇರಿದು ಕೊಲೆ ಮಾಡಿ, ಇಬ್ಬರನ್ನ ಗಾಯಗೊಳಿಸಿರುವ ಘಟನೆ ಫ್ರಾನ್ಸ್‌ನ ವಿಶ್ವ ಪ್ರಸಿದ್ಧ ಐಫೆಲ್‌ ಟವರ್‌ ಬಳಿ ನಡೆದಿದೆ. ಗಾಯಗೊಂಡ ಇಬ್ಬರಲ್ಲಿ ಓರ್ವನನ್ನ ಬ್ರಿಟನ್‌ ಮೂಲದ ವ್ಯಕ್ತಿ ಅಂತ ಗುರುತಿಸಲಾಗಿದೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ರಿಯಾಕ್ಟ್‌ ಮಾಡಿದ್ದು, ಇದು ‘ಉಗ್ರರ ದಾಳಿ’ ಅಂತ ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನ ಬಂಧಿಸಲಾಗಿದೆ. ಬಂಧಿತ ವ್ಯಕ್ತಿ 26 ವರ್ಷದ ಫ್ರೆಂಚ್‌ ಪ್ರಜೆಯಾಗಿದ್ದು, ಇಸ್ಲಾಂ ಸ್ಟೇಟ್‌ಗಾಗಿ ಪ್ರತಿಜ್ಞೆ ಮಾಡಿದ್ದ. ಗಾಜಾದಲ್ಲಿ ಮುಸ್ಲಿಮರ ಸದ್ಯದ ಪರಿಸ್ಥಿತಿ ಮತ್ತು ಅಪ್ಘಾನ್‌, ಪಾಲೇಸ್ತಾನ್‌ನಲ್ಲಿ ಮುಸ್ಲಿಮರು ಹೆಚ್ಚಾಗಿ ಸಾಯುತ್ತಿರೋ ಹಿನ್ನಲೆಯಲ್ಲಿ ಈ ರೀತಿ ಮಾಡಿದ್ದಾನೆಂದು ಗುಪ್ತಚರ ಇಲಾಖೆ ಸಚಿವ ಜೆರಾಲ್ಡ್‌ ಡಾರ್ಮಾನಿನ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply