ರೈತರಿಗೆ ಮನ್ಮುಲ್‌ ಶಾಕ್:‌ ಪ್ರತಿ ಲೀಟರ್‌ ಹಾಲಿಗೆ 1.50 ರೂ ಇಳಿಕೆ

masthmagaa.com:

ಕಾವೇರಿ ಕೊಳ್ಳದ ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಾಕ್‌ ಮೇಲೆ ಶಾಕ್‌ ನೀಡ್ತಿವೆ. ಒಂದು ಕಡೆ ಕೇಂದ್ರ ಸರ್ಕಾರ ಕಾವೇರಿ ನೀರನ್ನ ತಮಿಳು ನಾಡಿಗೆ ಹರಿಸಿ ಅಂತ ಒಂದಾದ ಮೇಲೊಂದು ಆದೇಶ ನೀಡ್ತಿದ್ರೆ, ಇನ್ನೊಂದು ಕಡೆ ಮಂಡ್ಯ ಜಿಲ್ಲೆ ಹಾಲು ಒಕ್ಕೂಟ (ಮನ್ಮುಲ್)‌ ಹಾಲಿನ ದರ ಕಡಿಮೆ ಮಾಡಿ ಶಾಕ್‌ ನೀಡಿದೆ. ಪ್ರತಿ ಲೀಟರ್‌ ಹಾಲಿಗೆ 1.50 ರೂಪಾಯಿ ಇಳಿಸಿ ಮನ್ಮುಲ್‌ ಆದೇಶ ನೀಡಿದೆ. 33.50 ರೂಪಾಯಿ ಇದ್ದ ಹಾಲಿನ ಬೆಲೆಯನ್ನ 32ಕ್ಕೆ ಇಳಿಸಿದೆ. ಅದು ಸಾಲಲ್ಲ ಅಂತ ಪ್ರತಿ ಚೀಲ ಪಶು ಆಹಾರಗಳ ಬೆಲೆಯನ್ನ 50 ರೂಪಾಯಿ ಜಾಸ್ತಿ ಮಾಡಿದೆ. ಇದರಿಂದ ಮಂಡಳಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿ, ಕೂಡಲೆ ದರ ಹೆಚ್ಚಳ ಮಾಡದಿದ್ರೆ ಬೀದಿಗಿಳಿದು ಹೋರಾಟ ಮಾಡ್ತೀವಿ ಅಂತ ಎಚ್ಚರಿಕೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply