ಭಾರತ ಇಡೀ ವಿಶ್ವದಲ್ಲೇ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ: ಪ್ರಧಾನಿ ಮೋದಿ

masthmagaa.com:

ಪಕ್ಕದ ಚೀನಾದಲ್ಲಿ ಕೊರೊನಾ ಸ್ಪೋಟವಾಗ್ತಿದ್ದು ಭಾರತದಲ್ಲೂ ಸಹ ಕೋವಿಡ್‌ ಆತಂಕ ಮನೆ ಮಾಡಿದೆ. ಇದೀಗ ಕೊರೊನಾ ಕುರಿತು ಪ್ರಧಾನಿ ಮೋದಿ ಮಾತನಾಡಿದ್ದು ಜನರಿಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕೋವಿಡ್‌ ಹರಡ್ತಾಯಿದೆ.. ಹೀಗಾಗಿ ನಾವು ಸಹ ಎಚ್ಚರಿಕೆ ವಹಿಸಬೇಕು ಅಂತ ಮೋದಿ ದೇಶದ ಜನರಿಗೆ ಕರೆ ನೀಡಿದ್ದಾರೆ. ಈ ವರ್ಷದ ಕೊನೆಯ ಹಾಗೂ 96ನೇ ಆವೃತ್ತಿಯ ಮನ್‌ ಕೀ ಬಾತ್‌ನಲ್ಲಿ ಮಾತನಾಡಿದ ಮೋದಿ, ಪ್ರಪಂಚದ ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದನ್ನ ನಾವು ನೋಡುತ್ತಿದ್ದೇವೆ. ನಾವು ಜಾಗರೂಕರಾಗಿರಬೇಕು. ಮಾಸ್ಕ್‌ ಧರಿಸೋದು, ಕೈಗಳನ್ನು ತೊಳೆದುಕೊಳ್ಳೋದು ಸೇರಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಅಂತ ಹೇಳಿದ್ದಾರೆ. ಜೊತೆಗೆ ಮುಂಬರುವ ಹಬ್ಬಗಳನ್ನ ಸಹ ಎಚ್ಚರಿಕೆಯಿಂದ ಆಚರಿಸುವಂತೆ ಸಲಹೆ ನೀಡಿದ್ದಾರೆ. ಇನ್ನು ಇದೇ ವೇಳೆ ದೇಶದ ಅಭಿವೃದ್ದಿಯ ಕುರಿತು ಮಾತನಾಡಿದ ಪ್ರಧಾನಿ, ಭಾರತ ವೇಗವಾಗಿ ಪ್ರಗತಿ ಸಾಧಿಸಿದೆ.. ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ. 2022ರ ಅನೇಕ ಯಶಸ್ಸುಗಳು ಇಂದು ಇಡೀ ಜಗತ್ತಿನಲ್ಲಿ ಭಾರತಕ್ಕೆ ವಿಶೇಷ ಸ್ಥಾನವನ್ನು ಸೃಷ್ಟಿ ಮಾಡಿವೆ ಅಂತ ಹೇಳಿದ್ದಾರೆ. ಇನ್ನು ಕೊರೊನಾ ಹೆಚ್ಚಳದ ಭೀತಿ ಹಿನ್ನೆಲೆಯಲ್ಲಿ ಕೇಂದ್ರದಿಂದ ಈಗಾಗಲೇ ಕೆಲವು ಮಾರ್ಗಸೂಚಿಗಳನ್ನ ಪ್ರಕಟ ಮಾಡಲಾಗಿದೆ. ಜೊತೆಗೆ ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ಮಾಡಿಸೋದಕ್ಕೆ ಸೂಚನೆ ನೀಡಲಾಗಿದೆ. ಇತ್ತ ಎರಡು ದಿನಗಳ ಹಿಂದೆಯಷ್ಟೇ ಚೀನಾದಿಂದ ವಾಪಾಸ್ಸಾಗಿದ್ದ ವ್ಯಕ್ತಿಯೊಬ್ರಲ್ಲಿ ಕೊರೊನಾ ಪಾಸಿಟಿವ್‌ ಬಂದಿದೆ. ಐಸೋಲೇಷನ್‌ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗ್ತಿದ ಅಂತ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply