ಫೇಸ್‌ಬುಕ್‌ ಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ಗೆ ಗಾಯ, ಸರ್ಜರಿ!

masthmagaa.com:

ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ MMA(Mixed Martial Arts) ಅಭ್ಯಾಸದ ವೇಳೆ ಗಾಯಗೊಂಡು ಸರ್ಜರಿಗೆ ಒಳಗಾಗಿದ್ದಾರೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರೊ ಜುಕರ್‌ಬರ್ಗ್ “ಮುಂದಿನ ವರ್ಷದ ಆರಂಭದಲ್ಲಿ ಶೆಡ್ಯುಲ್‌ ಆಗಿದ್ದ ಫೈಟ್‌ ಒಂದಕ್ಕೆ ಅಭ್ಯಾಸ ಮಾಡುವಾಗ ಮೊಣಕಾಲಿನ ಲಿಗಮೆಂಟ್‌ಗೆ ಗಾಯವಾಗಿದೆ. ಸರ್ಜರಿ ನಂತ್ರ ರಿಕವರ್‌ ಆಗ್ತಿದ್ದೇನೆ. ಪಂದ್ಯ ಕೊಂಚ ಮುಂದೆ ಹೋಗಲಿದೆ” ಅಂದಿದ್ದಾರೆ. ಅಂದ್ಹಾಗೆ ಕೋವಿಡ್‌ ಟೈಮ್ನಲ್ಲಿ ಜುಕರ್‌ಬರ್ಗ್‌ MMA ಮತ್ತು Jiu-jitsu ಗಳ ಟ್ರೈನಿಂಗ್‌ ಸ್ಟಾರ್ಟ್‌ ಮಾಡ್ಕೊಂಡ್ರು. ಅಲ್ಲಿವರೆಗೆ ಒಬ್ಬ ಇಂಟಲಿಜೆಂಟ್‌ ಮಿಲಿನೆಯರ್‌ ಇಮೇಜ್‌ ಹೊಂದಿದ್ದ ಜುಕರ್ಬರ್ಗ್‌, ಆಗರ್ಭ ಶ್ರೀಮಂತಿಕೆಯ ವ್ಯಕ್ತಿಯಾದ್ರು ದೇಹವನ್ನ ದಂಡಿಸಿ ಕೇಜ್‌ನಲ್ಲಿ ಎದುರಾಳಿಗಳೊಡನೆ ಫೈಟ್‌ ಮಾಡಿ ಯುವಕ್ರನ್ನ ಇನ್ಸ್‌ಪೈರ್‌ ಮಾಡಿದ್ದಾರೆ. ಈ ವರ್ಷದ ಮೊದಲಾರ್ಧದಲ್ಲು ಸಹ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಜೊತೆ UFC ಯಲ್ಲಿ ಸೆಣಸಾಡೋ ಬಗ್ಗೆ ಇಬ್ಬರು ಬಿಸಿನೆಸ್ ಟೈಕೂನ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ಚಿಟ್‌ಚಾಟ್‌ ನಡೆಸಿದ್ರು. ಮಸ್ಕ್‌ ಸಹ ನಮ್ಮ ಮನೆಯ ಗಾರ್ಡನ್‌ನಲ್ಲಿ ಒಂದು ಪ್ರಾಕ್ಟೀಸ್‌ ಮ್ಯಾಚ್‌ ಆಡಣ ಬನ್ನಿ ಅಂತ ಕಾಲೆಳೆದಿದ್ರು. ಆನಂತ್ರ ಇಬ್ಬರೂ ಆ ಫೈಟ್‌ ಬಗ್ಗೆ ಮಾತನಾಡ್ಲಿಲ್ಲ. ಜುಕರ್‌ಬರ್ಗ್‌ ಮಾತ್ರ ತಮ್ಮ MMA ಜರ್ನಿಯನ್ನ ಕಂಟಿನ್ಯು ಮಾಡಿದ್ದಾರೆ.

-masthmagaa.com

Contact Us for Advertisement

Leave a Reply