ಕೇರಳದಲ್ಲಿ ಲವ್‌ ಜಿಹಾದ್‌ ಕೇಸ್‌: ಅರ್ಜಿ ವಜಾಗೊಳಿಸಿದ ಕೇರಳ ಕೋರ್ಟ್

masthmagaa.com:

ಕೇರಳದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಕ್ರಿಶ್ಚಿಯನ್‌ ಯುವತಿಯ ಲವ್‌ ಜಿಹಾದ್‌ ಕೇಸ್‌ಗೆ ಸಂಬಂಧಪಟ್ಟಂತೆ ಕೇರಳ ಕೋರ್ಟ್‌ ತೀರ್ಪು ಪ್ರಕಟಮಾಡಿದ್ದು ಅರ್ಜಿಯನ್ನ ವಜಾಗೊಳಿಸಿದೆ. ಈ ಮೂಲಕ ತನ್ನ ಮಗಳನ್ನ ಮುಸ್ಲಿಂ ಯುವಕ ಬಲವಂತವಾಗಿ ಮದುವೆಯಾಗಿದ್ದಾನೆ. ಲವ್‌ ಜಿಹಾದ್‌ ಮಾಡಿದ್ದಾನೆ ಅಂತ ಅರ್ಜಿ ನೀಡಿದ್ದ ಯುವತಿಯ ತಂದೆಗೆ ಮುಖಭಂಗವಾಗಿದೆ. ಇನ್ನು ಈ ಬಗ್ಗೆ ಯುವತಿ ಕೂಡ ಪ್ರತಿಕ್ರಿಯೆಸಿದ್ದು ನಾನು ಯಾವುದೇ ಒತ್ತಡಕ್ಕೂ ಮದುವೆಯಾಗಿಲ್ಲ. ನಾನು ಇಷ್ಟಪಟ್ಟೇ ಮದುವೆಯಾಗಿದ್ದೀನಿ ಅಂತ ಹೇಳಿಕೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply