ಮೇರಿ ಕೋಮ್‌ ಬಾಕ್ಸಿಂಗ್‌ಗೆ ನಿವೃತ್ತಿ! ಮೇರಿ ನಿಜವಾಗ್ಲೂ ಹೇಳಿದ್ದೇನು?

masthmagaa.com:

ಬಾಕ್ಸಿಂಗ್‌ನ್ನೇ ಜೀವವಾಗಿಸ್ಕೊಂಡ ಭಾರತದ ಲೆಜೆಂಡರಿ ಬಾಕ್ಸರ್‌ ಮೇರಿ ಕೋಮ್‌ ತಮ್ಮ ಬಾಕ್ಸಿಂಗ್‌ ಗ್ಲವ್ಸ್‌ಗೆ ಗುಡ್‌ಬೈ ಹೇಳಿದ್ದಾರನ್ನೋ ಸುದ್ದಿ ಹರಿದಾಡಿತ್ತು. ಇದೀಗ ಈ ಬಗ್ಗೆ ಕ್ಲಾರಿಟಿ ಕೊಟ್ಟಿರೋ ಮೇರಿ ಕೋಮ್‌, ʻಬಾಕ್ಸಿಂಗ್‌ನಿಂದ ನಿವೃತ್ತಿ ಹೊಂದೋ ಬಗ್ಗೆ ಅನೌನ್ಸ್‌ ಮಾಡಿದ್ದೆ ಅನ್ನೋ ಮೀಡಿಯಾಗಳ ವರದಿ ಸುಳ್ಳು. ನಾನು ಈ ರೀತಿ ಸ್ಟೇಟ್‌ಮೆಂಟ್‌ ನೀಡೇ ಇಲ್ಲ, ನನ್ನ ಮಾತನ್ನ ತಿರುಚಲಾಗಿದೆ. ನನ್ನ ರಿಟಾಯರ್ಮೆಂಟ್‌ ಬಗ್ಗೆ ಅನೌನ್ಸ್‌ ಮಾಡೋ ಕಾಲ ಬಂದಾಗ ನಾನೇ ಖುದ್ದು ಮೀಡಿಯಾ ಮುಂದೆ ಬರ್ತೀನಿʼ ಅಂತೇಳಿದ್ದಾರೆ. ಜೊತೆಗೆ ʻಅಸ್ಸಾಂನ ಸ್ಕೂಲ್‌ ಇವೆಂಟ್‌ ಒಂದ್ರಲ್ಲಿ ಮಕ್ಕಳನ್ನ ಉದ್ದೇಶಿಸಿ ಮಾತನಾಡೋವಾಗ ಏಜ್‌ ಲಿಮಿಟ್‌ನಿಂದ ಒಲಂಪಿಕ್ಸ್‌ನಲ್ಲಿ ಸ್ಪರ್ಧಿಸೋಕೆ ಆಗಲ್ಲ ಅಂತ ಹೈಲೈಟ್‌ ಮಾಡಿದ್ದೇ ಅಷ್ಟೇ. ಆದ್ರೆ ನಿವೃತ್ತಿ ಹೊಂದೋ ಬಗ್ಗೆ ಹೇಳಿಕೊಂಡಿಲ್ಲ. ನಾನೀಗಲೂ ನನ್ನ ಫಿಟ್ನೆಸ್‌ ಬಗ್ಗೆ ಫೋಕಸ್ಡ್‌ ಆಗಿದ್ದೀನಿʼ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply