ಪ್ರಧಾನಮಂತ್ರಿ ಸಂಗ್ರಹಾಲಯ ಲೋಕಾರ್ಪಣೆ: ಮೊದಲ ಟಿಕೆಟ್‌ ಖರೀದಿಸಿದ ಮೋದಿ

masthmagaa.com:

ಪ್ರಧಾನಿ ಮೋದಿ ಇವತ್ತು ‘ಪ್ರಧಾನ್ ಮಂತ್ರಿ‌ ಸಂಗ್ರಹಾಲಯʼವನ್ನ ಉದ್ಘಾಟನೆ ಮಾಡಿದ್ರು. ಹಾಗೆ ಈ ಮ್ಯೂಸಿಯಂನ ಮೊದಲ ಟಿಕೇಟನ್ನ ಕೂಡ ಖರೀದಿಸಿದ್ರು. ಈ ಮ್ಯೂಸಿಯಂನಲ್ಲಿ ನಮ್ಮ ದೇಶವನ್ನ ಮುನ್ನಡೆಸಿದ 14 ಪ್ರಧಾನ ಮಂತ್ರಿಗಳ ಬಗ್ಗೆ, ಅವರ ಕೆಲಸ ಕಾರ್ಯಗಳ ಬಗ್ಗೆ, ಮತ್ತು ಅವ್ರ ಕಾರ್ಯಾವಧಿಯಲ್ಲಿ ಯಾವರೀತಿಯ ಸವಾಲುಗಳನ್ನ ಸ್ವೀಕರಿಸಿದ್ರು ಅನ್ನೋದ್ರ ಮಾಹಿತಿ ಇದೆ. ಜೊತೆಗೆ ಇಲ್ಲಿ ನಮ್ಮ ದೇಶದ ಮೊದಲ ಪ್ರಧಾನಿ ನೆಹರು ಅವರಿಗೆ ದೇಶ, ವಿದೇಶಗಳಲ್ಲಿ ಸಿಕ್ಕ ಉಡುಗೊರೆಯನ್ನ ಕೂಡ ಸಂಗ್ರಹಿಸಿ ಇಡಲಾಗಿದೆ. ಇನ್ನು ಈ ವಸ್ತು ಸಂಗ್ರಹಾಲಯದಲ್ಲಿ ಹೊಲೊಗ್ರಾಮ್‌, ವರ್ಚುವಲ್ ರಿಯಾಲಿಟಿ ಮೂಲಕ ಪ್ರಧಾನ ಮಂತ್ರಿಗಳ ಬಗ್ಗೆ ಮಾಹಿತಿಯನ್ನ ಅತ್ಯಂತ ಸುಲಭವಾಗಿ, ಆಸಕ್ತಿದಾಯಕವಾಗಿ ಪ್ರಸ್ತುತ ಪಡಿಸುವ ಪ್ರಯತ್ನವನ್ನ ಮಾಡಿದ್ದಾರೆ. ಪ್ರಧಾನಿ ಮೋದಿ ಮಾತಾಡಿ ಇಲ್ಲಿ ನಿಮ್ಗೆ ಸ್ವತಃ ನಮ್ಮ ಹಿಂದಿನ ಪ್ರಧಾನ ಮಂತ್ರಿಗಳ ಜೊತೆಗೆ ನಿಂತು ಸೆಲ್ಫೀ ತೆಗೆದುಕೊಳ್ತಾ ಇರೋ ಅನುಭವ ಆಗುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply