ನಾವು ಕ್ರಿಕೆಟ್‌ ಮೈದಾನದಲ್ಲಿ ಮಾತ್ರ ವಿಶ್ವದ ಅತ್ಯುತ್ತಮ ಆಗೋಕೆ ಸ್ಪರ್ಧೆ ಮಾಡ್ತೀವಿ, ಆದ್ರೆ..?ಆಸ್ಟ್ರೇಲಿಯಾ ಪ್ರಧಾನಿ ಹೇಳಿದ್ದೇನು?

masthmagaa.com:

ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವ್ರು ಇಂದು ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಹಿಂದೂ ದೇವಸ್ಥಾನಗಳ ಮೇಲೆ ಆಗ್ತಿರೊ ದಾಳಿಗಳ ಬಗ್ಗೆ ಮೋದಿ ಪ್ರಸ್ತಾಪಿಸಿದ್ದಾರೆ. ಕಳೆದ ಕೆಲವು ವಾರಗಳಿಂದ ಆಸ್ಟ್ರೇಲಿಯದಲ್ಲಿ ದೇವಸ್ಥಾನಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ನಿರಂತರವಾಗಿ ವರದಿಗಳು ಬರ್ತಿರೋದು ವಿಷಾದದ ಸಂಗತಿ. ಇಂತಹ ಸುದ್ದಿಗಳು ಭಾರತದಲ್ಲಿನ ಪ್ರತಿಯೊಬ್ಬರನ್ನು ಚಿಂತೆಗೀಡುಮಾಡುತ್ತೆ. ಈ ಬಗ್ಗೆ ಅಲ್ಬನೀಸ್‌ ಅವ್ರಿಗೆ ನಾನು ತಿಳಿಸಿದ್ದೇನೆ. ಭಾರತೀಯ ಸಮುದಾಯದ ಸುರಕ್ಷತೆಗೆ ವಿಶೇಷ ಆದ್ಯತೆ ಕೊಡೊದಾಗಿ ಅಲ್ಬನೀಸ್‌ ಭರವಸೆ ಕೊಟ್ಟಿದ್ದಾರೆ ಅಂತ ಮೋದಿ ತಮ್ಮ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ ಉಭಯ ದೇಶಗಳ ಭದ್ರತೆ ಹಾಗೂ ರಕ್ಷಣಾ ಪಾಲುದಾರಿಕೆಯನ್ನ ಹೆಚ್ಚಿಸಲು ಬದ್ಧವಾಗಿದ್ದೀವೆ. ಆಸ್ಟ್ರೇಲಿಯಾ ಮತ್ತು ಭಾರತ ಗ್ರೇಟ್‌ ಫ್ರೆಂಡ್ಸ್‌ ಹಾಗೂ ನಮ್ಮ ಪಾರ್ಟನರ್‌ಶಿಪ್‌ ಅನ್ನ ಪ್ರತಿದಿನ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡ್ತಿದೀವಿ ಅಂತ ಅಲ್ಬನೀಸ್‌ ಹೇಳಿದ್ದಾರೆ. ಸಂಸ್ಕೃತಿ, ಆರ್ಥಿಕ ಸಂಬಂಧಗಳು ಹಾಗೂ ಭದ್ರತೆ ಕ್ಷೇತ್ರಗಳಲ್ಲಿ ಸ್ಟ್ರಾಂಗ್‌ ಸಂಬಂಧವನ್ನ ಬಿಲ್ಡ್‌ ಮಾಡೋಕೆ ಆಸ್ಟ್ರೇಲಿಯಾ ಭಾರತದ ಜೊತೆ ಸಹಕರಿಸೋಕೆ ಬಯಸುತ್ತೆ. ನಾವು ಕ್ರಿಕೆಟ್‌ ಮೈದಾನದಲ್ಲಿ ಮಾತ್ರ ವಿಶ್ವದ ಅತ್ಯುತ್ತಮ ಆಗೋಕೆ ಸ್ಪರ್ಧೆ ಮಾಡ್ತೀವಿ, ಆದ್ರೆ ನಾವು ಒಟ್ಟಾಗಿ ಉತ್ತಮ ಜಗತ್ತನ್ನ ನಿರ್ಮಿಸುತ್ತಿದ್ದೇವೆ ಅಂತ ಅಲ್ಬನೀಸ್‌ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply