ಅನಂತ್‌ನಾಗ್‌-ರಜೌರಿಯಲ್ಲಿ ಇಬ್ಬರು ಮಾಜಿ ಕಾಶ್ಮೀರಿ ಸಿಎಂಗಳ ಮಧ್ಯೆ ಕಾದಾಟ!

masthmagaa.com:

ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಜಮ್ಮು ಕಾಶ್ಮೀರದ ಸಿಎಂಗಳಿಬ್ಬರ ಕಾದಾಟದ ಅಖಾಡಕ್ಕೆ ಅನಂತ್‌ನಾಗ್‌-ರಜೌರಿ ಕ್ಷೇತ್ರ ಸಜ್ಜಾಗಿದೆ. ಈ ಕ್ಷೇತ್ರದಿಂದ DPAP ಪಕ್ಷದಿಂದ ಮಾಜಿ ಸಿಎಂ ಗುಲಾಂ ನಬೀ ಆಜಾದ್‌ ಸ್ಫರ್ಧೆ ಮಾಡೋದಾಗಿ ಘೋಷಿಸಿದ್ರು. ಇದೀಗ ಇದೇ ಕ್ಷೇತ್ರದಿಂದ ತಮ್ಮ PDP ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯೊದಾಗಿ ಮತ್ತೊರ್ವ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಸ್ಪಷ್ಟ ಪಡಿಸಿದ್ದಾರೆ. ಈ ಇಬ್ಬರು ಘಟಾನುಘಟಿ ನಾಯಕರ ಮಧ್ಯೆ INDI ಕೂಟದ ಅಭ್ಯರ್ಥಿಯಾಗಿ ಮಿಯಾನ್‌ ಅಲ್ತಾಫ್‌ ಅಹ್ಮದ್‌ ಕೂಡ ಸ್ಫರ್ಧೆ ಮಾಡ್ತಿದ್ದಾರೆ. ಈ ಮೂಲಕ ದೇಶದ ಹೈವೊಲ್ಟೇಜ್‌ ಕ್ಷೇತ್ರಗಳ ಲಿಸ್ಟ್‌ನಲ್ಲಿ ಈಗ ಅನಂತನಾಗ್‌-ರಜೌರಿ ಕೂಡ ಸೇರ್ಕೊಂಡಿದೆ.

-masthmagaa.com

Contact Us for Advertisement

Leave a Reply