RSS ದಸರಾ ರ‍್ಯಾಲಿ: ಏಕತೆ, ಅಭಿವೃದ್ಧಿ ಮಂತ್ರ ಸಾರಿದ ಭಾಗವತ್‌, ಶಂಕರ್‌ ಮಹದೇವನ್‌

masthmagaa.com:

ಎಲ್ಲಾ ಪಕ್ಷಗಳ ಕಾರ್ಯವೈಖರಿಯನ್ನು ನೋಡಿದ್ದೀರಿ, ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಸರಿಯಾದ ಪಕ್ಷಕ್ಕೆ ಮತ ನೀಡಿ. ವೋಟ್‌ ಮಾಡುವಾಗ ಏಕತೆ, ದೇಶದ ಸಮಗ್ರತೆ, ಅಭಿವೃದ್ಧಿಯನ್ನ ತಲೆಯಲ್ಲಿ ಇಟ್ಕೊಳ್ಳಿ” ಅಂತ RSS ಮುಖ್ಯಸ್ಥ ಮೋಹನ್‌ ಭಾಗವತ್‌ ಕರೆ ಕೊಟ್ಟಿದ್ದಾರೆ. ಮಹಾರಾಷ್ಟ್ರದ ನಾಗ್‌ಪುರ್‌ನಲ್ಲಿ ನಡೆದ ದಸರಾ ರ‍್ಯಾಲಿಯ ವೇಳೆ ಮಾತಾಡಿರುವ ಭಾಗವತ್‌ ಮಣಿಪುರ ಹಿಂಸಾಚಾರ, ರಾಮ ಮಂದಿರ ಹಾಗೂ ಚುನಾವಣೆ ಕುರಿತು ಮಾತಾಡಿದ್ದಾರೆ. ‘ಮಣಿಪುರದಲ್ಲಿ ಹಿಂಸಾಚಾರ ನಡೆದಿಲ್ಲ, ಬದಲಿಗೆ ಸೃಷ್ಟಿಸಲಾಗಿದೆ. ಇದರ ಹಿಂದೆ ಬಾಹ್ಯ ಶಕ್ತಿಗಳ ಕೈವಾಡ ಇದೆ.
ಹಲವಾರು ವರ್ಷಗಳಿಂದ ಮಣಿಪುರದಲ್ಲಿ ಕುಕಿ ಮತ್ತು ಮೇಥಿ ಸಮುದಾಯಗಳು ಸಹಬಾಳ್ವೆಯಿಂದ ಬಾಳ್ತಿದ್ದಾರೆ. ಅದು ಹೇಗೆ ಇದ್ದಕ್ಕಿದ್ದಂತೆ ಹಿಂಸಾಚಾರ ಭುಗಿಲೆದ್ದಿತು? ಅಂತ ಪ್ರಶ್ನಿಸಿದ್ದಾರೆ. ಈ ಸಂಘರ್ಷದಿಂದ ಬಾಹ್ಯ ಶಕ್ತಿಗಳಿಗೆ ಪ್ರಯೋಜನವಿದ್ದು, ಈ ಹಿಂಸಾಚಾರದಲ್ಲಿ ಬಾಹ್ಯ ಶಕ್ತಿಗಳು ಕೆಲಸ ಮಾಡಿರುವ ಅನುಮಾನವಿದೆ’ ಅಂತ ಆರೋಪಿಸಿದ್ದಾರೆ. ಇನ್ನು ಕಮ್ಯುನಿಸ್ಟ್‌ ನಾಯಕರ ವಿರುದ್ಧವೂ ಕಿಡಿಕಾರಿರುವ ಭಾಗವತ್‌, ಕೆಲವು ವಿದ್ವಂಸಕ ಶಕ್ತಿಗಳು ತಮ್ಮನ್ನ ತಾವು ‘ಸಾಂಸ್ಕೃತಿಕ ಮಾರ್ಕ್ಸ್‌ವಾದಿಗಳು’ ಅಂತ ಕರೆದುಕೊಳ್ತಾರೆ. ಆದ್ರೆ 20ರ ದಶಕದ ನಂತ್ರ ಅವ್ರು ಮಾರ್ಕ್ಸ್‌ನ್ನ ಕೂಡ ಮರೆತಿದ್ದಾರೆ. ಎಲ್ಲದನ್ನೂ ಅವ್ರು ವಿರೋಧಿಸ್ತಾರೆ. ಸ್ವಯಂಸೇವಕನೇ ಆಗಿರ್ಲಿ ಅಥವಾ ಬದ್ಧ ಕಮ್ಯುನಿಸ್ಟೇ ಆಗಿರ್ಲಿ ಯಾರೇ ಒಳ್ಳೇ ಕೆಲಸ ಮಾಡಿದ್ರು ಇವ್ರು ಹಾಳ್‌ ಮಾಡ್ತಾರೆ ಅಂತ ಹೇಳಿದ್ದಾರೆ. ಅಂದ್ಹಾಗೆ ಇತ್ತೀಚೆಗೆ ತಾನೆ ಭಾಗವತ್‌ CPIನ ಜೆನರಲ್‌ ಸೆಕ್ರಟರಿ AB ಬರ್ಧನ್‌ ಅವ್ರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ್ರು. ಅದ್ರ ಬೆನ್ನಲ್ಲೇ ಈ ರೀತಿ ಹೇಳಿಕೆ ನೀಡಿದ್ದಾರೆ. ಇನ್ನು ಅತ್ತ ಅಯೋಧ್ಯೆ ಶ್ರೀರಾಮ ಮಂದಿರ ಜನವರಿ 22 ರಿಂದ ತೆರೆದುಕೊಳ್ಳಲಿದೆ ಅಂತ ತಿಳಿಸಿದ್ದಾರೆ. ಜೊತೆಗೆ ಅಂದು ದೇಶದೆಲ್ಲೆಡೆ ದೇವಸ್ಥಾನಗಳಲ್ಲಿ ಹಲವು ಕಾರ್ಯಕ್ರಮಗಳನ್ನ ಆಯೋಜಿಸಿ ಅಂತ ಕರೆಕೊಟ್ಟಿದ್ದಾರೆ.

ಇನ್ನು ಅತ್ತ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ನಡೆದ ದಸರಾ ಆಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದಾರೆ. ಈ ವೇಳೆ ಮುಂದಿನ ರಾಮನವಮಿ ಹಬ್ಬವನ್ನ ಅಯೋಧ್ಯೆಯ ರಾಮಮಂದಿರದಲ್ಲಿ ಆಚರಿಸಲಾಗುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply