ಮೆಟಾಗೆ ಭಾರಿ ಲಾಭ: ಬಿಲ್‌ ಗೇಟ್ಸ್‌ ಹಿಂದಿಕ್ಕಿದ ಮಾರ್ಕ್‌ ಜುಕರ್‌ಬರ್ಗ್

masthmagaa.com:

ವಾಲ್‌ ಸ್ಟ್ರೀಟ್‌ನಲ್ಲಿ ಮೆಟಾ ದಾಖಲೆ ಲಾಭ ಗಳಿಸಿದ ಬೆನ್ನಲ್ಲೇ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಶ್ರೀಮಂತಿಕೆಯಲ್ಲಿ ಮೈಕ್ರೋಸಾಫ್ಟ್‌ ಸ್ಥಾಪಕ ಬಿಲ್‌ ಗೇಟ್ಸ್‌ರನ್ನ ಹಿಂದಿಕ್ಕಿದ್ದಾರೆ. ಫೇಸ್‌ಬುಕ್‌ 20ನೇ ವರ್ಷದ ಆನಿವರ್ಸರಿ ಇರೋದ್ರಿಂದ ಮೆಟಾ ಸಂಸ್ಥೆ $50 ಬಿಲಿಯನ್‌ ಮೌಲ್ಯದ ಷೇರು ಮರುಖರೀದಿ ಮಾಡ್ತೀವಿ ಅಂದಿತ್ತು. ಅಲ್ಲದೆ ಕಳೆದ ತ್ರೈಮಾಸಿಕದಲ್ಲಿ ಪ್ರತಿ ಷೇರಿಗೆ 50 ಸೆಂಟ್ಸ್‌, ಅಂದ್ರೆ ಸುಮಾರು 41-12 ರೂಪಾಯಿ ಲಾಭ ಪಡೆದಿತ್ತು. ಇದರ ಬೆನ್ನಲ್ಲೇ ಗುರುವಾರ ಮೆಟಾದ ಮಾರ್ಕೆಟ್‌ ಬೂಮ್‌ ಆಗಿ ಒಂದೇ ದಿನ $196 ಬಿಲಿಯನ್‌ ಲಾಭಾಂಶ ಪಡೆದಿತ್ತು. ಇದ್ರಿಂದ ಮೆಟಾದಲ್ಲಿ 13% ಷೇರು ಹೊಂದಿರೋ ಮಾರ್ಕ್‌ ಜುಕರ್‌ಬರ್ಗ್ ಆಸ್ತಿ ಮೌಲ್ಯ $165 ಬಿಲಿಯನ್‌ಗೆ ತಲುಪಿದೆ. ಈ ಮೂಲಕ ಜುಕರ್‌ಬರ್ಗ್‌ $124 ಬಿಲಿಯನ್‌ ಒಡೆಯರಾದ ಬಿಲ್‌ ಗೇಟ್ಸ್‌ರನ್ನ ಹಿಂದಿಕ್ಕಿದ್ದಾರೆ. ಅಂದ್ಹಾಗೆ ಮೆಟಾದ ಡಿವಿಡೆಂಟ್‌ ಪ್ಲಾನ್‌ ಪ್ರಕಾರ ಜುಕರ್‌ಬರ್ಗ್‌ ಪ್ರತಿ ಕ್ವಾರ್ಟರ್‌ನಲ್ಲಿ $175 ಮಿಲಿಯನ್‌ ಹಣ ಪಡೀತಾರೆ.

-masthmagaa.com

Contact Us for Advertisement

Leave a Reply