ಟ್ವಿಟರ್‌ ನಂತ್ರ ಚಾಟ್‌ಜಿಪಿಟಿಗೆ ಟಕ್ಕರ್‌ ಕೊಟ್ಟ ಮೆಟಾ!

masthmagaa.com:

ಟ್ವಿಟರ್‌ ನಂತ್ರ ಮೆಟಾ ಸಂಸ್ಥಾಪಕ ಈಗ ಚಾಟ್‌ಜಿಪಿಟಿಗೆ ಸ್ಪರ್ಧೆ ಕೊಡೋಕೆ ಮುಂದಾಗಿದ್ದಾರೆ. ಇದೀಗ ಮೆಟಾ ತನ್ನ ಹೊಸ AI ಮಾಡೆಲ್‌ ಒಂದನ್ನ ಲಾಂಚ್‌ ಮಾಡಿದೆ. ನೇರವಾಗಿ ಬಳಕೆದಾರರಿಗೆ AI ಪ್ರಾಡಕ್ಟ್‌ ನೀಡುವ ಬದಲು LLaMA (Large Language Model Meta AI)ವನ್ನ ಮೆಟಾ ಡೆವಲಪ್‌ ಮಾಡಿ ರಿಲೀಸ್‌ ಮಾಡಿದೆ. ಈ LLaMA ಓಪನ್‌ ಸೋರ್ಸ್‌ ಆಗಿದ್ದು, ಇದರ ಎಲ್ಲಾ ಆಂತರಿಕ ಕಾರ್ಯಾಚರಣೆಗಳು ಎಲ್ಲರಿಗೂ ಲಭ್ಯವಿರುತ್ತೆ. ಯಾರು ಬೇಕಾದ್ರು ಚೇಂಜಸ್‌ ಮಾಡ್ಬೋದು. ಈ ಬಗ್ಗೆ ಮಾಹಿತಿ ನೀಡಿರುವ ಮಾರ್ಕ್‌, ಓಪನ್‌ ಸೋರ್ಸ್‌ನಿಂದಾಗಿ ಇನ್ನೊವೇಟಿವ್‌ ಐಡಿಯಾಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಡೆವಲಪರ್‌ಗಳು ಹೊಸ ಹೊಸ ಟೆಕ್ನಾಲಜಿಯನ್ನ ನಿರ್ಮಿಸೋಕೆ ಸಾಧ್ಯವಾಗುತ್ತದೆ. ಜೊತೆಗೆ ಇದ್ರಲ್ಲಿರೋ ಇಶ್ಯೂಗಳನ್ನ ಗುರುತಿಸಿ ಅವುಗಳನ್ನ ಫಿಕ್ಸ್‌ ಮಾಡೋಕೆ ಎಲ್ಲರಿಗೂ ಅವಕಾಶ ಇರೋದ್ರಿಂದ ಸುರಕ್ಷತೆ ಹಾಗೂ ಭದ್ರತೆಯನ್ನ ಇಂಪ್ರೂವ್‌ ಮಾಡ್ಬೋದು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply