ವಾಲ್‌ ಸ್ಟ್ರೀಟ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ ಮೆಟಾ ಸಂಸ್ಥೆ!

masthmagaa.com:

ಫೇಸ್‌ಬುಕ್‌ ಪೋಷಕ ಸಂಸ್ಥೆ ಮೆಟಾ ಶುಕ್ರವಾರ ವಾಲ್‌ ಸ್ಟ್ರೀಟ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಒಂದೇ ದಿನದಲ್ಲಿ ತನ್ನ ಸ್ಟಾಕ್‌ ಮಾರ್ಕೆಟ್‌ ವ್ಯಾಲ್ಯೂನಲ್ಲಿ ಮೆಟಾ $196 ಬಿಲಿಯನ್‌ ಲಾಭ ಗಳಿಸಿದೆ. ಇದು ವಾಲ್‌ ಸ್ಟ್ರೀಟ್‌ ಇತಿಹಾಸದಲ್ಲೇ ಅತಿ ಹೆಚ್ಚು ಒಂದು ದಿನದ ಗಳಿಕೆಯಾಗಿದೆ. ಮೆಟಾ ತನ್ನ ಅದ್ಬುತ ಆರ್ಥಿಕ ಪಲಿತಾಂಶವನ್ನ ಅನೌನ್ಸ್‌ ಮಾಡಿದ ಬೆನ್ನಲ್ಲೇ ಈ ರೀತಿ ಮೆಟಾ ಷೇರುಗಳ ಬೆಲೆ ಜಂಪ್‌ ಮಾಡಿತ್ತು. ಇನ್ನು ಫೆಬ್ರವರಿ 4ಕ್ಕೆ ಫೇಸ್‌ಬುಕ್‌ನ 20ನೇ ಆನಿವರ್ಸರಿ ಇರೋದ್ರಿಂದ ಮೆಟಾ $50 ಬಿಲಿಯನ್‌ ಡಾಲರ್‌ ಮೌಲ್ಯದ ಷೇರುಗಳ ಮರುಖರೀದಿ ಮಾಡೋದಾಗಿ ಹೇಳಿತ್ತು. ಅಲ್ಲದೆ ಕಳೆದ ಕ್ವಾರ್ಟರ್‌ನಲ್ಲಿ ಪ್ರತಿ ಷೇರಿಗೆ 50% ಲಾಭಾಂಶ ಬಂದಿರೋದನ್ನ ಘೋಷಣೆ ಮಾಡಿತ್ತು. ಹೀಗಾಗಿ ಮೆಟಾ ಷೇರುಗಳು ಜಂಪ್‌ ಆಗಿ ದಾಖಲೆ ನಿರ್ಮಿಸಿವೆ.

-masthmagaa.com

Contact Us for Advertisement

Leave a Reply