ಮೆಟಾವರ್ಸ್‌ನಲ್ಲಿ ಬೆಂಗಳೂರು ಏರ್‌ಪೋರ್ಟ್‌ನ ಟರ್ಮಿನಲ್‌ 2!

masthmagaa.com:

ಹಲವು ವಿಶೇಷತೆಗಳಿಂದಲೇ ಜನಮನ್ನಣೆ ಗಳಿಸಿರೋ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಇತ್ತೀಚೆಗೆ ಉದ್ಘಾಟನೆಗೊಂಡಿರೊ ʻಟರ್ಮಿನಲ್‌ 2ʼ ಅನ್ನು ಮೆಟಾವರ್ಸ್‌ ಮೂಲಕ ನೋಡಬಹುದು. ವರ್ಚುವಲ್‌ ಆಗಿ ಒಳ ಪ್ರವೇಶಿಸಿದ ಅನುಭವ ಪಡೆಯಬಹುದು ಅಂತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಡಳಿತ ತಿಳಿಸಿದೆ. ಈ ನಿಟ್ಟಿನಲ್ಲಿ ಮೊದಲ ಹಂತದ ʻBLR ಮೆಟಾಪೋರ್ಟ್‌ʼ ಅನ್ನೊ ಯೋಜನೆಗೆ ಚಾಲನೆ ನೀಡಲಾಗಿದೆ. ಇದರೊಂದಿಗೆ ಬೆಂಗಳೂರು ವಿಮಾನ ನಿಲ್ದಾಣ ವಿಶ್ವದಲ್ಲೇ ʻಮೆಟಾವರ್ಸ್‌ʼನಲ್ಲಿ ಕಾಣಿಸಿಕೊಂಡ ಮೊದಲ ವಿಮಾನ ನಿಲ್ದಾಣವಾಗಿ ಗುರುತಿಸಿಕೊಂಡಿದೆ.

-masthmagaa.com

Contact Us for Advertisement

Leave a Reply