ಮೆಟಾ ಬೋರ್ಡ್‌ನಿಂದ ಕೆಳಗಿಳಿದ ಶೆರಿಲ್‌ ಸ್ಯಾಂಡ್‌ಬರ್ಗ್‌!

masthmagaa.com:

ಮೆಟಾ ಅಥವಾ ಫೇಸ್ಬುಕ್‌ನ ಸೀನಿಯರ್‌ ಅಧಿಕಾರಿ ಶೆರಿಲ್‌ ಸ್ಯಾಂಡ್‌ಬರ್ಗ್‌ ಮೆಟಾ ಬೋರ್ಡ್‌ನಿಂದ ಕೆಳಗಿಳಿದಿದ್ದಾರೆ. ಫೇಸ್‌ಬುಕ್‌ನ ಆರಂಭದ ದಿನಗಳಿಂದ COO ಚೀಫ್‌ ಆಫೀಸರ್‌ ಆಗಿದ್ದ ಶೆರಿಲ್‌ ಸುಮಾರು 14 ವರ್ಷಗಳಿಂದ ಕೆಲಸ ಮಾಡ್ತಿದ್ರು. ಜುಕರ್‌ಬರ್ಗ್‌ ಬಿಟ್ರೆ ಫೇಸ್‌ಬುಕ್‌ನ ಎರಡನೇ ಮುಖ್ಯ ವ್ಯಕ್ತಿ ಎನಿಸಿಕೊಂಡಿದ್ರು. ಕಳೆದ ವರ್ಷ COO ಹುದ್ದೆ ತೊರೆದಿದ್ದ ಈಕೆ ಈಗ ಮೆಟಾ ಬೋರ್ಡ್‌ ಆಫ್‌ ಡೈರೆಕ್ಟರ್ಸ್‌ ಹುದ್ದೆಗೂ ರಾಜಿನಾಮೆ ನೀಡಿದ್ದಾರೆ. ಇನ್ಮುಂದೆ ಕೇವಲ ಸಲಹೆಗಾರ್ತಿಯಾಗಿ ಮುಂದುವರೀತಿನಿ ಅಂತ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply