ಮುರಿದು ಬಿದ್ದ ಈಕ್ವೆಡಾರ್‌, ಮೆಕ್ಸಿಕೋ ನಡುವಿನ ದ್ವಿಪಕ್ಷೀಯ ಸಂಬಂಧ!

masthmagaa.com:

ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಮೆಕ್ಸಿಕೋ, ಈಕ್ವೆಡಾರ್‌ ನಡುವಿನ ದ್ವಿಪಕ್ಷೀಯ ಸಂಬಂಧ ಮುರಿದು ಬಿದ್ದಿದೆ. ಈಕ್ವೆಡಾರ್‌ನ ರಾಜಧಾನಿ ಕ್ವಿಟೊದಲ್ಲಿರೋ ಮೆಕ್ಸಿಕೊ ರಾಯಭಾರ ಕಚೇರಿಗೆ ಅನುಮತಿ ಇಲ್ದೇ ಅಲ್ಲಿನ ಪೊಲೀಸರು ನುಗ್ಗಿ ಈಕ್ವೆಡಾರ್‌ನ ಮಾಜಿ ಉಪಾಧ್ಯಕ್ಷ ಜಾರ್ಜ್‌ ಗ್ಲಾಸ್‌ರನ್ನ ಅರೆಸ್ಟ್‌ ಮಾಡಿದ್ದಾರೆ. ಈ ಕಾರಣದಿಂದ ಈಕ್ವೆಡಾರ್‌ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನ ಮೆಕ್ಸಿಕೋ ಮುರಿದುಕೊಂಡಿದೆ. ಅಂದ್ಹಾಗೆ ಎರಡು ಭ್ರಷ್ಟಾಚಾರ ಕೇಸ್‌ಗಳನ್ನ ಎದುರಿಸ್ತಿದ್ದ ಈ ಗ್ಲಾಸ್‌ನಿಗಾಗಿ ಈಕ್ವೆಡಾರ್‌ ಪೊಲೀಸರು ಹುಡುಕಾಟ ನಡೆಸ್ತಿದ್ರು. ಆದ್ರೆ ಈತ ಪೊಲೀಸರ ಕಣ್ತಪ್ಪಿಸಿ ಕ್ವಿಟೊದಲ್ಲಿನ ಮೆಕ್ಸಿಕೊ ರಾಯಭಾರ ಕಚೇರಿಯಲ್ಲಿ ಆಶ್ರಯ ಕೇಳಿ, ಅಲ್ಲೆ ಅವಿತುಕೊಂಡಿದ್ದ. ಈ ಮಾಹಿತಿ ಪಡೆದ ಪೊಲೀಸರು ಹಿಂದು ಮುಂದು ನೋಡದೇ…ಕಚೇರಿ ಒಳಗೆ ನುಗ್ಗಿ ಅರೆಸ್ಟ್‌ ಮಾಡಿದ್ದಾರೆ. ಜೊತೆಗೆ ಈತನಿಗೆ ಮೆಕ್ಸಿಕೊ ಕಚೇರಿ ಆಶ್ರಯ ನೀಡಿದ್ದು ಕಾನೂನುಬಾಹಿರ ಅಂತ ಈಕ್ವೆಡಾರ್‌ ಸಿಡಿಮಿಡಿಗೊಂಡಿದೆ. ಆದ್ರೆ ಪೊಲೀಸರು ಪರ್ಮಿಶನ್‌ ಇಲ್ದೇ ನಮ್ಮ ಕಚೇರಿಗೆ ನುಗ್ಗಿ ಗ್ಲಾಸ್‌ರನ್ನ ಅರೆಸ್ಟ್‌ ಮಾಡಿದ್ದಾರೆ ಅಂತೇಳಿ ಮೆಕ್ಸಿಕೋ, ಈಕ್ವೆಡಾರ್‌ ಜೊತೆಗಿನ ದ್ವಿಪಕ್ಷೀಯ ಸಂಬಂಧವನ್ನೆ ಮುರ್ಕೊಂಡಿದೆ.

-masthmagaa.com

Contact Us for Advertisement

Leave a Reply