ಅಮೆರಿಕದ ಸೇನಾ ಘಟಕಗಳ ಮೇಲೆ ಚೀನಾ ಬೆಂಬಲಿತ ಹ್ಯಾಕರ್‌ಗಳ ಅಕ್ರಮ ಚಟುವಟಿಕೆ! ಮೈಕ್ರೋಸಾಫ್ಟ್‌ ಆರೋಪಿಸಿದ್ದೇನು?

masthmagaa.com:

ಅಮೆರಿಕ ಹಾಗೂ Guamನ ಪ್ರಮುಖ ಮೂಲಸೌಕರ್ಯಗಳ ಮೇಲೆ ಚೀನಾ ಬೆಂಬಲಿತ ಹ್ಯಾಕರ್‌ಗಳು ಅಕ್ರಮ ಚಟುವಟಿಕೆಗಳನ್ನ ಮಾಡ್ತಿದಾರೆ MNC ಮೈಕ್ರೋಸಾಫ್ಟ್‌ ಆರೋಪಿಸಿದೆ. Volt Typhoon ಪ್ರೋಗ್ಯಾಮ್‌ 2021ರಿಂದ ಅಮೆರಿಕದಲ್ಲಿ ಆಕ್ಟೀವ್‌ ಇದೆ. ಇದು ಭವಿಷ್ಯದ ಬಿಕ್ಕಟ್ಟಿನ ಸಮಯದಲ್ಲಿ ಅಮೆರಿಕ ಹಾಗೂ ಏಷ್ಯಾ ರಾಷ್ಟ್ರಗಳ ನಡುವಿನ ಸಂಪರ್ಕಕ್ಕೆ ತೊಂದರೆ ಉಂಟುಮಾಡುವ ಸಾಮರ್ಥ್ಯವನ್ನ ಬೆಳೆಸಿಕೊಳ್ತಿದೆ ಅಂತ ಮೈಕ್ರೋಸಾಫ್ಟ್‌ ಹೇಳಿದೆ. ಅಮೆರಿಕದ ಪ್ರಮುಖ ಸೇನಾ ಘಟಕಗಳು Guamನಲ್ಲಿದ್ದು, ಏಷ್ಯಾ-ಪೆಸಿಫಿಕ್‌ ಬಿಕ್ಕಟ್ಟಿನ ಸಮಯದಲ್ಲಿ ಅಲ್ಲಿಂದಲೇ ನೇರ ಪ್ರತಿಕ್ರಿಯೆ ನೀಡಲಾಗುತ್ತೆ. ಹೀಗಾಗಿ ಅಂಥ ಪ್ರಮುಖ ಸೇನಾ ಘಟಕಗಳನ್ನ ಈ Volt Typhoon ಟಾರ್ಗೆಟ್‌ ಮಾಡಿದೆ ಅಂತ ಮೈಕ್ರೋಸಾಫ್ಟ್‌ ಆರೋಪ ಮಾಡಿದೆ. ಇದೇ ವೇಳೆ ಇದಕ್ಕಾಗಿ ಕೆಲ ಜನರನ್ನ ಟಾರ್ಗೆಟ್‌ ಮಾಡಿ ಅವ್ರಿಂದ ಮಾಹಿತಿಯನ್ನ ಪಡೆದುಕೊಳ್ತಿದೆ ಅಂತಾನೂ ಹೇಳಿದೆ. ಆದ್ರೆ ಈ ಆರೋಪಗಳಿಗೆ ಅಮೆರಿಕದಲ್ಲಿರೊ ಚೀನಾದ ಎಂಬಸ್ಸಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

-masthmagaa.com

Contact Us for Advertisement

Leave a Reply