ಗೂಗಲ್‌ ವಿರುದ್ಧ ಮೈಕ್ರೋಸಾಫ್ಟ್‌ CEO ಸತ್ಯ ನಡೆಲ್ಲಾ ಗಂಭೀರ ಆರೋಪ!

masthmagaa.com:

ಗೂಗಲ್‌ ವಿರುದ್ಧ ಮೈಕ್ರೋಸಾಫ್ಟ್‌ನ CEO ಸತ್ಯ ನಡೆಲ್ಲಾ ಗಂಭೀರ ಆರೋಪ ಮಾಡಿದ್ದಾರೆ. ಮಾರ್ಕೆಟ್‌ನಲ್ಲಿ ತನ್ನ ಏಕಸ್ವಾಮ್ಯ ಸಾಧಿಸಲು ಗೂಗಲ್‌ ಕೋಟ್ಯಾಂತರ ಹಣ ನೀಡ್ತಿದೆ. ಇದ್ರಿಂದ ಗೂಗಲ್‌ ಜೊತೆ ಪೈಪೋಟಿ ಮಾಡೋಕೆ ಇತರ ಕಂಪನಿಗಳಿಗೆ ಸಾಧ್ಯವಾಗ್ತಿಲ್ಲ ಅಂತ ಆರೋಪಿಸಿದ್ದಾರೆ. ಇನ್ನು ಈ ಬಗ್ಗೆ ವಾಷಿಂಗ್‌ಟನ್‌ ಡಿಸಿಯ ನ್ಯಾಯಾಲಯದಲ್ಲಿ ಮಾತಾಡಿರೊ ನಡೆಲ್ಲಾ, 2009 ರಿಂದ ಮಾರ್ಕೆಟ್‌ನಲ್ಲಿ ಗೂಗಲ್‌ ವಿರುದ್ಧ ಮೈಕ್ರೋಸಾಫ್ಟ್‌ನ ಬಿಂಗ್‌ ತನ್ನ ಮಾರ್ಕೆಟ್‌ ಬಿಲ್ಡ್‌ ಮಾಡಲು ಟ್ರೈ ಮಾಡ್ತಿದೆ. ಆದ್ರೆ ಗೂಗಲ್‌ನ ಆಪಲ್‌ ಜೊತೆಗಿನ ಕೆಲ ಅರೇಂಜ್‌ಮೆಂಟ್‌ಗಳಿಂದ ಸ್ಪರ್ಧೆ ಮಾಡೋಕೆ ಆಗ್ತಿಲ್ಲ ಅಂತ ವಾಗ್ದಾಳಿ ಮಾಡಿದ್ದಾರೆ. ಇದೇ ವೇಳೆ ನೀವು ಗೂಗಲ್‌ನ್ನ ಪಾಪುಲರ್‌ ಅಂತ ಕರಿಬಹುದು. ಆದ್ರೆ ನಂಗೆ ಇದು ಡಾಮಿನಂಟ್‌ ಅಥ್ವಾ ತನ್ನ ಪ್ರಾಬಲ್ಯವನ್ನ ತೋರಿಸ್ತಿದೆ ಅಂತ ಅನಸ್ತಿದೆ ಅಂತ ಹೇಳಿದ್ದಾರೆ. ಅಲ್ದೇ ಮೈಕ್ರೋಸಾಫ್ಟ್‌ ಐಫೋನ್‌ನಲ್ಲಿ ಬಿಂಗ್‌ ಡಿಫಾಲ್ಟ್‌ ಸರ್ಚ್‌ ಇಂಜೀನ್‌ ಆಗೋಕೆ ಹೆಚ್ಚಿನ ಹಣವನ್ನ ಕೊಡೊಕೆ ರೆಡಿ ಇತ್ತು. ಆದ್ರೆ ಆಪಲ್‌ ಗೂಗಲ್‌ ಜೊತೆಗೆ ಸೆಟಲ್‌ ಆಗಿ, ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ಹಣವನ್ನ ಪಡಿತಾಯಿದೆ ಎಂದಿದ್ದಾರೆ. ಅಂದ್ಹಾಗೆ ಮೂರು ತಿಂಗಳಿನಿಂದ ನಡಿತಾಯಿರೊ ಈ ಆಂಟಿಟ್ರಸ್ಟ್‌ ಕೇಸ್‌, ಗೂಗಲ್‌ ವಿರುದ್ದ ನಡಿತಾಯಿರೊ ಅತಿದೊಡ್ಡ ಟ್ರೈಯಲ್‌ ಆಗಿದೆ ಅಂತ ಹೇಳಲಾಗಿದೆ. ಇನ್ನು ಮೈಕ್ರೋಸಾಫ್ಟ್‌ ಹಾಗೂ ಗೂಗಲ್‌ ನಡುವೆ ವೈರತ್ವ ನಿನ್ನೆ, ಇವತ್ತಿನದಲ್ಲ. ಇದು ಕಳೆದ 20 ವರ್ಷಗಳಿಂದ ನಡಿತಾಯಿದೆ. 20 ವರ್ಷಗಳ ಹಿಂದೆ ಮೈಕ್ರೋಸಾಫ್ಟ್‌ ಆಪರೇಟಿಂಗ್‌ ಸಿಸ್ಟಮ್‌ನಲ್ಲಿ ಪ್ರಾಬಲ್ಯ ತೋರಿಸ್ತಿದೆ ಅಂತ ಗೂಗಲ್‌ ಆರೋಪ ಮಾಡಿತ್ತು.

-masthmagaa.com

Contact Us for Advertisement

Leave a Reply