ಟೋಕಿಯೋ ಬಿಟ್ಟು ಬೇರೆ ಕಡೆಗೆ ಶಿಫ್ಟ್‌ ಆಗುವ ಕುಟುಂಬಗಳಿಗೆ ಜಪಾನ್‌ ಸರ್ಕಾರದಿಂದ ಆರ್ಥಿಕ ನೆರವು!

masthmagaa.com:

ಜಪಾನ್‌ನ ನಗರಗಳಲ್ಲಿ ಯುವಕರ ಸಂಖ್ಯೆ ಹೆಚ್ಚಿದ್ದು, ಹಳ್ಳಿಗಳಲ್ಲಿ ಏಜ್‌ ಆದವ್ರ ಜನಸಂಖ್ಯೆ ಹೆಚ್ಚಾಗ್ತಿದೆ. ಇದನ್ನ ಬ್ಯಾಲೆನ್ಸ್‌ ಮಾಡೋಕೆ ಜಪಾನ್‌ ಸರ್ಕಾರ ಮುಂದಾಗಿದೆ. ಪಟ್ಟಣ ಪ್ರದೇಶಗಳಿಗೆ ಲೊಕೇಟ್‌ ಆಗೋ ಕುಟುಂಬಗಳ ಒಂದು ಮಗುಗೆ 6.1 ಲಕ್ಷ ರೂಪಾಯಿಯಂತೆ ಪ್ರೋತ್ಸಾಹ ಧನ ಕೊಡೋದಾಗಿ ಜಪಾನ್‌ ಸರ್ಕಾರ ಅನೌನ್ಸ್‌ ಮಾಡಿದೆ. ಇನ್ನು ಟೋಕಿಯೊ, ಒಸಾಕ ಮತ್ತು ಇತರ ನಗರಗಳಿಗೆ ಹೆಚ್ಚಾಗಿ ಯುವ ಜನರು ವಲಸೆ ಬರ್ತಾರೆ. ಇದ್ರಿಂದ ದೇಶದ ಕೆಲವು ಭಾಗಗಳಲ್ಲಿ ಏಜ್‌ ಆದವ್ರ ಸಂಖ್ಯೆ ಜಾಸ್ತಿಯಾಗಿದೆ. ಹಾಗೂ ಅಲ್ಲಿನ ಜನಸಂಖ್ಯೆ ಕ್ಷೀಣಿಸ್ತಾಯಿದೆ. ಇದೇ ವೇಳೆ ಟೋಕಿಯೊದಲ್ಲಿ ಜನಸಾಂದ್ರತೆ ಹೆಚ್ಚಾಗಿದ್ದು, ಕಡಿಮೆ ಮಾಡೋ ಉದ್ದೇಶದಿಂದ ಜನರಿಗೆ ಹಣಕಾಸು ನೆರವು ನೀಡಿ ಪಟ್ಟಣ ಪ್ರದೇಶಗಳಿಗೆ ಹೋಗುವಂತೆ ಜಪಾನ್‌ ಸರ್ಕಾರ ಪ್ರೇರೆಪಿಸುತ್ತಿದೆ.

-masthmagaa.com

Contact Us for Advertisement

Leave a Reply