ಪಾಕ್‌ ಚುನಾವಣೆಯಿಂದ ಹಿಂದುಗಳು ಔಟ್‌! ಅಮೆರಿಕ ನಾಗರಿಕರಿಗೆ ಸುತ್ತೋಲೆ!

masthmagaa.com:

ಪಾಕ್‌ ಚುನಾವಣೆ ಫೆಬ್ರುವರಿ 08ಕ್ಕೆ ಫಿಕ್ಸ್‌ ಆಗಿದ್ದು, ಇದೀಗ ವಿವಿಧ ನೆಪಗಳನ್ನ ಕೊಟ್ಟು ಅಲ್ಲಿನ ಹಿಂದೂ ಅಲ್ಪಸಂಖ್ಯಾತರನ್ನ ಚುನಾವಣೆಯಿಂದ ಹೊರಗಿಡಲಾಗಿದೆ ಅನ್ನೋ ಸುದ್ದಿ ಬರ್ತಿದೆ. ಪಾಕ್‌ನ ಹಿಂದೂ ಕೌನ್ಸಿಲ್‌ನ ಮುಖ್ಯಸ್ಥ ರಮೇಶ್‌ ಕುಮಾರ್‌ ಈ ಆರೋಪ ಮಾಡಿದ್ದಾರೆ. ಗುರುತಿನ ಚೀಟಿ, ಹಾಗೂ ಇತರೆ ದಾಖಲೆಗಳ ಸಮಸ್ಯೆಯಿಂದ, ಕೆಲವರನ್ನ ಮಾತ್ರ ವೋಟರ್ಸ್‌ ಆಗಿ ರೆಜಿಸ್ಟರ್‌ ಮಾಡಿಕೊಳ್ಳಲಾಗಿದೆ ಅಂತ ರಮೇಶ್‌ ಕುಮಾರ್ ಹೇಳಿದ್ದಾರೆ.. ಪಾಕ್‌ನ ಒಟ್ಟು ಜನಸಂಖ್ಯೆಯಲ್ಲಿ ಕೇವಲ 2.14% ಹಿಂದುಗಳು ಇದ್ದಾರೆ. ಪಾಕ್‌ನ ಸಿಂಧ್‌ ಪ್ರಾಂತ್ಯದಲ್ಲಿ ಹಿಂದುಗಳ ಸಂಖ್ಯೆ ಅಲ್ಲಿನ ಒಟ್ಟು ಜನಸಂಖ್ಯೆಯ 9% ಇದೆ. ಆದ್ರೆ ದುರ್ಬಲ ಆರ್ಥಿಕ ವಲಯಕ್ಕೆ ಸೇರಿದ ಹಿಂದೂಗಳು ಅಥ್ವಾ ಸಿಂಧ್‌ನ ಹಳ್ಳಿ ಪ್ರದೇಶಗಳಲ್ಲಿ ಇರೋ ಹಿಂದುಗಳನ್ನ ಎಲೆಕ್ಷನ್‌ನಿಂದ ದೂರ ಇಡಲಾಗ್ತಿದೆ. ಅವರಿಗೆ, ದಾಖಲೆ ಮಾಡಿಸೋಕೂ ಪಾಕ್‌ ಸರ್ಕಾರ ಕ್ರಮ ತಗೊಂಡಿಲ್ಲಅಂತ ಅವರು ಹೇಳಿದ್ದಾರೆ. ಇತ್ತ ಪಾಕ್‌ ಚುನಾವಣೆ ಹಿನ್ನಲೆ ಅಮೆರಿಕ ತನ್ನ ನಾಗರಿಕರಿಗೆ ಕಟ್ಟೆಚ್ಚರ ವಹಿಸೋಕೆ ತಿಳಿಸಿದೆ. ಪಾಕಿಸ್ತಾನಕ್ಕೆ ಭೇಟಿ ನೀಡೋ ಪ್ಲಾನ್‌ ಹಾಕೊಂಡಿರೋ ಅಮೆರಿಕದ ಪ್ರಜೆಗಳಿಗೆ ಸುತ್ತೋಲೆ ಹೊರಡಿಸಿದೆ. ಚುನಾವಣೆಯಲ್ಲಿ ಏನಾದ್ರೂ ಅಹಿತಕರ ಘಟನೆ ಅಥ್ವಾ ಹಿಂಸಾಚಾರ ನಡೀಬೋದು ಹುಷಾರಾಗಿರಿ ಅಂತ ಅಡೈಸರಿ ಬಿಡುಗಡೆ ಮಾಡಿದೆ. ಇನ್ನೊಂದು ಕಡೆ ಪಾಕಿಸ್ತಾನಕ್ಕೆ ಮತ್ತೆ ಮಳೆಕಾಟ ಶುರುವಾಗಿದೆ. ವಾಣಿಜ್ಯ ನಗರಿ ಕರಾಚಿನಲ್ಲಿ ಫೆಬ್ರವರಿ 03ರಂದು ಜೋರಾಗಿ ಮಳೆ ಸುರಿದ ಪರಿಣಾಮ, ಅಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಅಲ್ಲಿನ ಹೈವೇಗಳು ಮಳೆ ನೀರಿನಿಂದ ತುಂಬ್ಕೊಂಡಿದ್ದು ಜನ ಹಿಡಿಶಾಪ ಹಾಕಿದ್ದಾರೆ.

-masthmagaa.com

Contact Us for Advertisement

Leave a Reply