ಸೌದಿ ವಾಯುಪ್ರದೇಶದಲ್ಲಿ ಯೆಮೆನ್‌ ಕ್ಷಿಪಣಿ! ಯುದ್ಧಕ್ಕೆ ಎಂಟ್ರಿಯಾಗತ್ತಾ ಸೌದಿ?

masthmagaa.com:

ಮಿಡಲ್‌ ಈಸ್ಟ್‌ನಲ್ಲಿ ಮೊತ್ತೊಂದು ದೊಡ್ಡ ಬೆಳವಣಿಗೆಯಾಗಿದೆ. ಯೆಮೆನ್‌ ಹೌತಿಗಳು ಹಾರಿಸಿರೊ ಮಿಸೈಲ್‌ವೊಂದು ಸೌದಿ ವಾಯುಪ್ರದೇಶದ ಮೇಲೆ ಹಾರಿದ್ದು, ಹೊಡೆದುರಳಿಸಿರೋದಾಗಿ ವರದಿಯಾಗಿದೆ. ಈ ಮೂಲಕ ಹಮಾಸ್‌ ಹಾಗೂ ಇಸ್ರೇಲ್‌ ಸಂಘರ್ಷದಲ್ಲಿ ಸೌದಿಯನ್ನ ಎಳೆತರುವ ಪ್ರಯತ್ನವನ್ನ ಹೌತಿಗಳು ಮಾಡ್ತಿದಾರೆ ಎನ್ನಲಾಗ್ತಿದೆ. ಇಸ್ರೇಲ್‌ನ್ನ ಗುರಿಯಾಗಿಸಿ ಮಿಸೈಲ್‌ ಒಂದನ್ನ ಹಾರಿಸಿದ್ದು, ಅದನ್ನ ಸೌದಿ ಅರೆಬಿಯಾದ ವಾಯುಪ್ರದೇಶದಲ್ಲಿ ಹೊಡೆದುರಳಿಸಲಾಗಿದೆ. ಮಿಸೈಲ್‌ ಹೊಡೆದುರಳಿಸಿರೊ ವಿಡಿಯೋ ಒಂದು ವೈರಲ್‌ ಆಗಿದ್ದು, ಈವರೆಗೆ ಸೌದಿಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಅಂದ್ಹಾಗೆ ಯೆಮೆನ್‌ನಲ್ಲಿರೊ ಹೌತಿ ಬಂಡುಕೋರರಿಗೆ ಇಸ್ರೇಲ್‌ ಹಾಗೂ ಸೌದಿ ಎರಡು ಶತ್ರುಗಳೆ. ಈ ರೀತಿ ಆವಾಗಾವಾಗ ಮಿಸೈಲ್‌ಗಳನ್ನ ಹಾರಾಸ್ತಾ ಇರ್ತಾರೆ. ಅಕ್ಟೋಬರ್‌ 2021ರಂದು ಸೌದಿಯ ಜಾಜಾನ್‌ ನಗರದ ಮೇಲೆ ಹಾರಿಸಿದ್ದ 5 ಬ್ಯಾಲಸ್ಟಿಕ್‌ ಮಿಸೈಲ್‌ಗಳನ್ನ ಸೌದಿಯ ವಾಯು ಪಡೆ ಹೊಡೆದುರಳಿಸಿತ್ತು. ಅಲ್ದೇ ಇತ್ತೀಚೆಗೆ ಅಕ್ಟೋಬರ್‌ 2023, ಹೌತಿಗಳು ಹಾರಿಸಿದ್ದ 4 ಮಿಸೈಲ್‌ಗಳು ಹಾಗೂ ಹಲವು ಡ್ರೋನ್‌ಗಳನ್ನ ಅಮೆರಿಕದ ಆಂಟಿ ಮಿಸೈಲ್‌ USS ಕಾರ್ನೇ ಹೊಡೆದು ಹಾಕಿತ್ತು.

-masthmagaa.com

Contact Us for Advertisement

Leave a Reply