ಕಾಣೆಯಾಗಿರುವ ಕ್ವಿನ್‌ ಗಾಂಗ್‌ರನ್ನ ವಿದೇಶಾಂಗ ಸಚಿವ ಸ್ಥಾನದಿಂದ ಕೆಳಗಿಳಿಸಿದ ಚೀನಾ!

masthmagaa.com:

ಕಳೆದ ಕೆಲವು ದಿನಗಳಿಂದ ಚೀನಾ ವಿದೇಶಾಂಗ ಸಚಿವ ಕ್ವಿನ್‌ ಗಾಂಗ್‌ ಅವ್ರು ಕಾಣೆಯಾಗಿದ್ದಾರೆ ಅನ್ನೋ ಸುದ್ಧಿ ಹರಿದಾಡುತ್ತಿತ್ತು. ಇದೀಗ ಗಾಂಗ್‌ರನ್ನ ವಿದೇಶಾಂಗ ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿದೆ ಅಂತ ಚೀನಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಇಂದು ನಡೆದ ಚೀನಾ ಶಾಸಕಾಂಗದ ಅಧಿವೇಶನದಲ್ಲಿ ಗಾಂಗ್‌ರನ್ನ ಸಚಿವ ಸ್ಥಾನದಿಂದ ತೆಗೆದು ಹಾಕಲು ನಿರ್ಧರಿಸಲಾಗಿದೆ ಅಂತ ವರದಿಯಲ್ಲಿ ತಿಳಿಸಲಾಗಿದೆ. ಅಂದ್ಹಾಗೆ ಕಳೆದ 23 ದಿನಗಳಿಂದ ಗಾಂಗ್‌ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದು ಸಾಕಷ್ಟು ಓಹಾಪೋಹಗಳು ಗರಿದಾಡಿದ್ದವು. ಆರೋಗ್ಯ ಸಮಸ್ಯೆಯಿಂದ ಗಾಂಗ್‌ ಪಬ್ಲಿಕ್‌ನಲ್ಲಿ ಕಾಣಿಸಿಕೊಳ್ತಿಲ್ಲ ಅಂತ ಚೀನಾ ಹೇಳಿತ್ತು. ಆದ್ರೆ ಈಗ ಸಚಿವ ಸ್ಥಾನದಿಂದ ತೆಗೆದು ಹಾಕಿರೋದಕ್ಕೆ ಕಾರಣ ಏನು ಅನ್ನೋದನ್ನ ಚೀನಾ ತಿಳಿಸಿಲ್ಲ.

-masthmagaa.com

Contact Us for Advertisement

Leave a Reply