ತಮಿಳುನಾಡು ಸಿಎಂ ಹುಟ್ಟುಹಬ್ಬಕ್ಕೆ ಬಿಜೆಪಿಯಿಂದ ಚೀನಿ ಗಿಫ್ಟ್‌!

masthmagaa.com:

ಇವತ್ತು ತಮಿಳುನಾಡಿನ ಸಿಎಂ ಎಮ್‌.ಕೆ. ಸ್ಟಾಲಿನ್‌ ಅವ್ರ ಬರ್ತ್‌ಡೆ. ಸೋ ಇದೀಗ ಸ್ಟಾಲಿನ್‌ ಅವ್ರಿಗೆ ವಿಪಕ್ಷ ಬಿಜೆಪಿ ಶುಭಕೋರಿದೆ. ಎಸ್‌…ತಮಿಳುನಾಡು ಬಿಜೆಪಿ ತಮ್ಮ ಅಫಿಶಿಯಲ್‌ `X’ ಖಾತೆಯಲ್ಲಿ ಸ್ಟಾಲಿನ್‌ ಅವ್ರಿಗೆ ವಿಶ್‌ ಮಾಡಿ…ಪೋಸ್ಟರ್‌ ಒಂದನ್ನ ಹಾಕ್ಬಿಟ್ಟಿದ್ದಾರೆ. ಆದ್ರೆ ಈ ಪೋಸ್ಟರ್‌ ನೋಡಿದ್ರೆ… ಬಿಜೆಪಿ ಹಾಕಿದ್ದಾ.. ಚೀನಾ ಕಡೆಯವ್ರು ಈ ಪೋಸ್ಟರ್‌ ಹಾಕಿದ್ರಾ ಅಂತ ಕನ್ಫ್ಯೂಸ್‌ ಆಗುತ್ತೆ. ಯಾಕಂದ್ರೆ ಆ ಪೋಸ್ಟರ್‌ನಲ್ಲಿ ಸ್ಟಾಲಿನ್‌ ಅವ್ರ ಫೋಟೋ ಅಂಟಿಸಿ ಚೀನಿ ಭಾಷೆಯಲ್ಲಿ ಹ್ಯಾಪಿ ಬರ್ತ್‌ಡೇ ಅಂತ ಬರೆಯಲಾಗಿದೆ. ಈ ಪೋಸ್ಟರ್‌ ಶೇರ್‌ ಮಾಡಿದ ತಮಿಳುನಾಡಿನ ಬಿಜೆಪಿ, ʻಮಾನ್ಯ ಸಿಎಂ ಅವ್ರಿಗೆ…ಅವ್ರ ಫೇವರೇಟ್‌ ಭಾಷೆಯಲ್ಲಿ ʻಹ್ಯಾಪಿ ಬರ್ತ್‌ಡೇʼʼ ಅಂತ ಬರೆದಿದ್ದಾರೆ. ʼಅಂದ್ಹಾಗೆ ಕೆಲ ದಿನಗಳ ಹಿಂದಷ್ಟೇ ಇಸ್ರೋದ ಹೊಸ ಲಾಂಚ್‌ ಪ್ಯಾಡ್‌ಗೆ ಸಂಬಂಧಪಟ್ಟಂತೆ ಸ್ಟಾಲಿನ್‌ ಸರ್ಕಾರ ರಾಕೆಟ್‌ ಇಮೇಜ್‌ಗೆ ಚೀನಾ ಭಾವುಟ ಬಳಸಿ ಎಡವಟ್ಟು ಮಾಡ್ಕೊಂಡಿತ್ತು.

-masthmagaa.com

Contact Us for Advertisement

Leave a Reply