ಪಾಕ್:‌ ಧರ್ಮನಿಂದನೆ ಆರೋಪದಲ್ಲಿ ವ್ಯಕ್ತಿಯನ್ನ ಹೊಡೆದು ಹತ್ಯೆ ಮಾಡಿದ ಜನರ ಗುಂಪು

masthmagaa.com:

ಧರ್ಮನಿಂದನೆ ಆರೋಪದಲ್ಲಿ ಜನರ ಗುಂಪು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿರೊ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಅಲ್ಲಿನ ಖೈಬರ್‌ ಪಂಖ್ತುಂಕ್ವಾ ಪ್ರಾಂತ್ಯದಲ್ಲಿ ನಡೆದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಪಕ್ಷದ ರ್ಯಾಲಿಯಲ್ಲಿ ಈ ಘಟನೆ ಸಂಭವಿಸಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. ವ್ಯಕ್ತಿಯನ್ನ ಜನರು ಹೊಡೆಯುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮೃತ ವ್ಯಕ್ತಿಯನ್ನ ನಿಗಾರ್‌ ಅಲಮ್‌ ಅಂತ ಗುರುತಿಸಲಾಗಿದ್ದು, ಈತನಿಗೆ ರ್ಯಾಲಿ ಕೊನೆಯಲ್ಲಿ ಪ್ರೇಯರ್‌ ಹೇಳಲು ಮನವಿ ಮಾಡಲಾಗಿತ್ತು. ಈ ವೇಳೆ ಆತನ ಹೇಳಿಕೆಗಳಿಗೆ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗ ಅಲಮ್‌ ಸ್ಥಳದಿಂದ ಓಡಿಹೋಗಿದ್ದಾನೆ. ಆದ್ರೆ ಜನರು ಆತನನ್ನ ಬಿಟ್ಟಿಲ್ಲ. ಸಂಬಂಧಿಕರ ಮನೆಯಲ್ಲಿ ಅಡಗಿದ್ದ ಅಲಮ್‌ನನ್ನ ಹುಡುಕಿ ಸಾಯೋವರೆಗೂ ಹೊಡೆದಿದ್ದಾರೆ ಅಂತ ಅಲ್ಲಿನ ಜಿಲ್ಲಾ ಪೊಲೀಸ್‌ ಅಧಿಕಾರಿ ಹೇಳಿದ್ದಾರೆ. ಇನ್ನು ಪಾಕಿಸ್ತಾನದಲ್ಲಿ ಧರ್ಮನಿಂದನೆಯನ್ನ ಬಹಳ ಗಂಭೀರವಾಗಿ ಪರಿಗಣಿಸಲಾಗುತ್ತೆ. 1987ರಿಂದ 2 ಸಾವಿರಕ್ಕಿಂತ ಅಧಿಕ ಜನರನ್ನ ಧರ್ಮನಿಂದನೆ ಪ್ರಕರಣದಲ್ಲಿ ಅರೆಸ್ಟ್‌ ಮಾಡಲಾಗಿದೆ. ಇದ್ರಲ್ಲಿ ಕನಿಷ್ಠ 88 ಆರೋಪಿಗಳನ್ನ ಜನರೇ ಹೊಡೆದು ಹತ್ಯೆ ಮಾಡಿದ್ದಾರೆ ಅಂತ ಪಾಕ್‌ನ ಸೋಷಿಯಲ್‌ ಜಸ್ಟೀಸ್‌ ಸೆಂಟರ್‌ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply