100 ದಿನ ನಿರ್ಣಾಯಕ, ನಂಬಿಕೆ ಗಳಿಸ್ಬೇಕು: ಪಿಎಂ ನರೇಂದ್ರ ಮೋದಿ

masthmagaa.com:

ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗ್ತಿದ್ಹಾಗೆ ಪ್ರಧಾನಿ ಮೋದಿ ಮತ್ತೆ ʻʻನಮಗೆ 400 ಸೀಟು ಸಿಗುತ್ತೆʼʼ ಅಂತ ಪುನುರುಚ್ಚಾರ ಮಾಡಿದ್ದಾರೆ.ʻʻಮುಂದಿನ 100 ದಿನಗಳು ನಿರ್ಣಾಯಕವಾಗಿರಲಿದೆ.. ಈ ಸಮಯದೊಳಗೆ ನಾವು ಎಲ್ಲಾ ಹೊಸ ಮತದಾರರನ್ನ ರೀಚ್‌ ಆಗ್ಬೇಕು. ಎಲ್ಲಾ ಫಲಾನುಭವಿಗಳು ಮತ್ತು ಸಮುದಾಯಗಳನ್ನ ರೀಚ್‌ ಆಗ್ಬೇಕು. ಪ್ರತಿಯೊಬ್ರ ನಂಬಿಕೆ ಗಳಿಸ್ಬೇಕು. ಎನ್‌ಡಿಎಗೆ 400 ಸೀಟ್‌ಗಳು ವರವಾಗ್ಬೇಕಾದ್ರೆ… ಬಿಜೆಪಿ 370 ಸೀಟ್‌ಗಳ ಗುರಿಯನ್ನ ಕ್ರಾಸ್‌ ಮಾಡಲೇಬೇಕುʼ ಅಂತ ತಮ್ಮ ಪಕ್ಷದ ಕಾರ್ಯಕರ್ತರಿಗೆ ಗೋಲ್‌ ಸೆಟ್‌ ಮಾಡಿದ್ದಾರೆ. ಅಷ್ಟೇ ಅಲ್ಲ ʻನಾನು ಅಧಿಕಾರದ ಆಸೆಗಾಗಿ ಅಥ್ವಾ ಅಧಿಕಾರದ ಪವರ್‌ನ್ನ ಎಂಜಾಯ್‌ ಮಾಡೋಕೆ ಮೂರನೇ ಭಾರೀ ಪಿಎಂ ಆಗೋಕೆ ಬಯಸ್ತಿಲ್ಲ. ಬದಲಿಗೆ ದೇಶಕ್ಕಾಗಿ ಕೆಲಸ ಮಾಡೋಕೆ ಮೂರನೇ ಅವಧಿಯನ್ನ ಬಯಸ್ತಿದ್ದೇನೆ. ನಾನು ಕೇವಲ ನನ್ನ ಮನೆ ಬಗ್ಗೆ ಮಾತ್ರ ಯೋಚ್ನೆ ಮಾಡ್ತಾ ಕೂತಿದಿದ್ರೆ… ಕೋಟ್ಯಂತರ ಜನರಿಗೆ ಮನೆ ಕಟ್ಟಿ ಕೊಡೋಕೆ ಸಾಧ್ಯವಾಗ್ತಾ ಇರಲಿಲ್ಲ. 10 ವರ್ಷಗಳ ಕಾಲ ಯಾವ್ದೇ ರೀತಿ ಕಳಂಕವಿಲ್ದೇ ಆಡಳಿತ ನಡೆಸಿ ಒಟ್ಟು 25 ಕೋಟಿ ಜನರನ್ನ ಬಡತನದಿಂದ ಹೊರತರೋದಂದ್ರೆ ಸುಲಭದ ಮಾತಲ್ಲ. ಒಮ್ಮೆ ಹಿರಿಯ ನಾಯಕರೊಬ್ರು… ಸಿಎಂ…ಪಿಎಂ ಆಗಿ ಸಾಕಷ್ಟು ಕೆಲಸ ಮಾಡಿದ್ರಿ, ಸಾಕಿನ್ನು ಸ್ವಲ್ಪ ರೆಸ್ಟ್‌ ಮಾಡಿ ಅಂತ ನನಗೆ ಹೇಳಿದ್ರು. ಆದ್ರೆ ನಾನು ಕೆಲಸ ಮಾಡ್ತಿರೋದು ರಾಷ್ಟ್ರನೀತಿಗೆ ಹೊರತು ರಾಜನೀತಿಗೆ ಅಲ್ಲʼ ಅಂತ‌ ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ … ಕೇಂದ್ರ ಗೃಹ ಸಚಿವ ಅಮಿತ್‌ ಶಾ, 2024ರ ಲೋಕಸಭಾ ಚುನಾವಣೆಯನ್ನ ಮಹಾಭಾರತ ಯುದ್ಧಕ್ಕೆ ಹೋಲಿಸಿದ್ದಾರೆ. ʻಮಹಾಭಾರತ ಯುದ್ಧದಲ್ಲಿ ಪಾಂಡವರು ಮತ್ತು ಕೌರವರು ಇದ್ದ ಹಾಗೇ ಇದೀಗ ಮುಂಬರೋ ಚುನಾವಣೆಯಲ್ಲೂ ಎರಡು ಕ್ಯಾಂಪ್‌ಗಳು ಇವೆ. ಒಂದು ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಬಿಜೆಪಿಯ ಎನ್‌ಡಿಎ ಆದ್ರೆ… ಇನ್ನೊಂದು ಕಾಂಗ್ರೆಸ್‌ ನೇತೃತ್ವದ I.N.D.I ಮೈತ್ರಿಕೂಟ. ಇದ್ರಲ್ಲಿ I.N.D.I ಬ್ಲಾಕ್‌, ಸಾಮ್ರಾಜ್ಯಶಾಹಿ ಪಾರ್ಟಿಗಳ ಕೂಟವಾಗಿದೆ. ಇಲ್ಲಿ ಬರೀ ಸಾಮ್ರಾಜ್ಯಶಾಹಿ, ಭ್ರಷ್ಟಾಚಾರ, ತುಷ್ಟೀಕರಣದ ರಾಜಕಾರಣಕ್ಕೆ ಬೆಂಬಲ ನೀಡಲಾಗುತ್ತೆ. ಆದ್ರೆ ಬಿಜೆಪಿ ನೇತೃತ್ವದ ಎನ್‌ಡಿಎ ಮಾತ್ರ ರಾಷ್ಟ್ರ ತತ್ವಗಳನ್ನ ಸರಿಯಾಗಿ ಫಾಲೋ ಮಾಡೋ ಪಾರ್ಟಿಗಳ ಕೂಟವಾಗಿದೆ. ಸೋ, ಇವೆರಡು ಕ್ಯಾಂಪ್‌ಗಳಲ್ಲಿ ಯಾವ ಕ್ಯಾಂಪ್‌ಗೆ ಅಧಿಕಾರ ನೀಡ್ಬೇಕು ಅಂತ ದೇಶದ ಜನತೆ ಡಿಸೈಡ್‌ ಮಾಡ್ಬೇಕುʼ ಅಂತ ಹೇಳಿದ್ದಾರೆ. ಅಲ್ದೇ I.N.D.I. ಕೂಟ 2G, 3G ಮತ್ತು 4G ಪಾರ್ಟಿಗಳು ಅಂತ ಕರೆದಿದ್ದಾರೆ. ಅಂದ್ರೆ ಆ ಪಾರ್ಟಿಗಳನ್ನ ಎರಡನೇ, ಮೂರನೇ ಹಾಗೂ ನಾಲ್ಕನೇ ತಲೆಮಾರಿನ ಫ್ಯಾಮಿಲಿಗಳು ನಡೆಸ್ತಿದ್ದಾರೆ ಅಂತ ಹೇಳಿದ್ದಾರೆ. ಇನ್ನೊಂದು ಕಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಅಧ್ಯಕ್ಷೀಯ ಅವಧಿಯನ್ನ ಇದೇ 2024ರ ಜೂನ್‌ ತನಕ ವಿಸ್ತರಣೆ ಮಾಡೋಕೆ ಬಿಜೆಪಿ ನಿರ್ಧಾರ ಮಾಡಿದೆ. ಈ ಮುಂಚೆ ಇದರ ಘೋಷಣೆ ಮಾಡಿತ್ತಾದ್ರೂ ಈಗ ಪಾರ್ಟಿಯ ನ್ಯಾಷನಲ್‌ ಕೌನ್ಸಿಲ್‌ ಅಪ್ರೂವಲ್‌ ಕೊಟ್ಟಿದೆ.

-masthmagaa.com

 

Contact Us for Advertisement

Leave a Reply